ಜಿಲ್ಲೆ

ಧರ್ಮಸ್ಥಳ ಯೋಜನೆ ದುರ್ಬಲ ವರ್ಗದವರಿಗೆ ಪ್ರೇರಣಾ ಶಕ್ತಿ : ಕರ್ನೂರು ‘ಆಟಿಟೊಂಜಿ’ ದಿನ ಕಾರ್ಯಕ್ರಮದಲ್ಲಿ ಶಶಿಧರ್ ಅಭಿಪ್ರಾಯ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಂದು ಪ್ರೇರಣಾ ಶಕ್ತಿ. ದುರ್ಬಲ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿ ತರುವ ಮಹತ್ಕಾರ್ಯ ಯೋಜನೆ ಮೂಲಕ ಆಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಕರ್ನೂರು ಒಕ್ಕೂಟ ವತಿಯಿಂದ ನೆಟ್ಟಣಿಗೆ ಮುಡ್ನೂರು ಸರ್ಕಾರಿ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರ್ನೂರು ಒಕ್ಕೂಟ ಅಧ್ಯಕ್ಷೆ ಆಶಾಲತಾ ರೈ ದೀಪ ಬೆಳಗಿಸಿದರು. ಆಟಿ ತಿಂಗಳ ವಿಶೇಷ ಖಾದ್ಯಗಳು ಮತ್ತು ಮನೋರಂಜನೆ ಆಟಗಳ ಕುರಿತು ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಮೀನಾಕ್ಷಿ ಮಾಹಿತಿ ನೀಡಿದರು. ಒಕ್ಕೂಟ ಉಪಾಧ್ಯಕ್ಷ ಸುಬ್ಬಣ್ಣ ರೈ ಅನುಭ ಹಂಚಿಕೊಂಡರು.

ಯೋಜನೆ ವಲಯ ಮೇಲ್ವಿಚಾರಕ ಹರೀಶ್ ಕುಲಾಲ್ ಅರಿಯಡ್ಕ, ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ ಕಾನ, ಯೋಜನೆಯ ಈಶ್ವರಮಂಗಲ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗಾಯತ್ರಿ ಕೆ.ಎಸ್., ಕರ್ನೂರು ಒಕ್ಕೂಟ ಕಾರ್ಯದರ್ಶಿ ಪ್ರಮೀಳಾ ರೈ, ಜತೆ ಕಾರ್ಯದರ್ಶಿ ವೀಣಾ ಕರ್ನೂರು, ನಮ್ಮ ಸೇವಾ ಕೇಂದ್ರದ ಬಿಎಲ್‌ಇ ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯ ಜಯಂತ ರೈ ಸ್ವಾಗತಿಸಿದರು. ಕರ್ನೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕುಸುಮಾ ರೈ ಕಾರ್ಯಕ್ರಮ ನಿರೂಪಿಸಿದರು.