ಪಿ.ಜಿ.ಜಗನ್ನಿವಾಸ ರಾವ್ ರಾಜೀನಾಮೆ ನೀಡಲಿ - ವಿಕ್ರಂ ಆಚಾರ್ಯ ಮಂಗಳೂರು ಆಗ್ರಹ

WhatsApp Image 2025-08-11 at 10.43.19_68082682
Published on

ಪುತ್ತೂರು: ಮಹಿಳೆಗೆ ಅನ್ಯಾಯ ಎಸಗಿದಾತನಿಂದ ಮಾತೃ ಸ್ವರೂಪಿಣಿಯಾದ ಶಾರದಾ ಮಾತೆಯನ್ನು ಪೂಜಿಸುವುದಕ್ಕೆ ನಮ್ಮ ವಿರೋಧವಿದೆ. ಅನ್ಯಾಯ ಎಸಗಿದವರು ಮುಂದಾಳತ್ವ ವಹಿಸುವುದಕ್ಕೆ ನಮ್ಮ ವಿರೋಧವಿದ್ದು, ತಕ್ಷಣ ಶಾರದಾ ಭಜನಾ ಮಂದಿರ ಅಧ್ಯಕ್ಷರಾಗಿರುವ ಪಿ. ಜಿ.ಜಗನ್ನಿವಾಸ ರಾವ್ ರಾಜೀನಾಮೆ ಸಲ್ಲಿಸಬೇಕು ಎಂದು ವಿಶ್ವಕರ್ಮ ಯುವ ಮಿಲನ ಸ್ಥಾಪಕಾಧ್ಯಕ್ಷ ವಿಕ್ರಂ ಆಚಾರ್ಯ ಮಂಗಳೂರು ಆಗ್ರಹಿಸಿದರು.

ಕಳಂಕ ರಹಿತರ ಮುಂದಾಳತ್ವದಲ್ಲಿ ನವರಾತ್ರಿಯಲ್ಲಿ ಶಾರದಾ ಮಾತೆಯ ಆರಾಧನೆ ನಡೆದುಕೊಂಡು ಬಂದಿದೆ. ಅನ್ಯಾಯಕ್ಕೊಳಗಾದ ಹೆಣ್ಣುವ ಮಗುವಿಗೆ ನ್ಯಾಯ ಒದಗಿಸುವಂತೆ ಬೇರೆ ಬೇರೆ ಮೂಲಗಳಿಂದ, ವೈಯಕ್ತಿಕವಾಗಿ ಮನವಿ ಮಾಡಿದರೂ ಶ್ರೀಕೃಷ್ಣ ಜೆ. ರಾವ್ ಕುಟುಂಬ ಸ್ಪಂದಿಸುತ್ತಿಲ್ಲ. ಈ ಕಾರಣದಿಂದ ಅವರ ಮುಂದಾಳುತ್ವದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಸಮಾಜದ ಬೆಂಬಲವಿಲ್ಲ. ಮಹಿಳೆಗೆ ನ್ಯಾಯ ಸಿಗುವ ತನಕ ಯಾವುದೇ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರದಲ್ಲಿ ಸೇರುವುದನ್ನು ಸಮುದಾಯ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಕರ್ಮ ಯುವಮಿಲನದ ಸುಬ್ರಹ್ಮಣ್ಯ ಆಚಾರ್ಯ, ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ತಾಡಿ, ಕೋಶಾಧಿಕಾರಿ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net