ಜಿಲ್ಲೆ

ಜೈನರಿಂದ ಸಮಾಜಕ್ಕೆ ಕೊಡುಗೆ : ರಾಜೇಶ್ ನೈಾಕ್ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಜೈನರು ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡುವುದರ ಮೂಲಕ ಗೌರವಾನ್ವಿತ ಸ್ಥಾನಮಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಹೇಳಿದರು. ಬಂಟ್ವಾಳದಲ್ಲಿ ಭಾನುವಾರ ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ವತಿಯಿಂದ ಜೈನ್ ಮಿಲನ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಅಶೋಕ್ ಜೈನ್ ಆರೋಗ್ಯ ಮಾಹಿತಿ ನೀಡಿದರು. ಮಿಲನೋತ್ತಮ ಪ್ರಶಸ್ತಿಯನ್ನು ಅಟ್ಲೊಟ್ಟು ಗುತ್ತು ಸುಕುಮಾರ್ ಜೈನ್ ಅವರಿಗೆ ಪ್ರದಾನ ಮಾಡಲಾಯಿತು. ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷ ಮಧ್ವರಾಜ್ ಜೈನ್ ಪಂಜಾಲು ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್ ತಮ್ಮನದ ಲೇಸ್ ಉದ್ಘಾಟಿಸಿದರು. ಪದಪ್ರದಾನದ ಪೌರೋಹಿತ್ಯವನ್ನು ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗ ಉಪಾಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ವಹಿಸಿದ್ದರು. ಅಧ್ಯಕ್ಷರಾಗಿ ರಾಜೇಂದ್ರ ಜೈನ್, ಕಾರ್ಯದರ್ಶಿಯಾಗಿ ಜಯಕೀರ್ತಿ ವೈ.ಎಸ್., ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಬಸ್ತಿಪಡ್ಪು, ಉಪಾಧ್ಯಕ್ಷರಾಗಿ ತೇಜ್ ಪಾಲ್ ಜೈನ್, ಡಾ.ಸೀಮಾ ಸುದೀಪ್, ಅರ್ಕಕೀರ್ತಿ ಹೆಗ್ಡೆ, ಹರ್ಷರಾಜ್ ಬಲ್ಲಾಳ್, ವಿನಯಚಂದ್ರ ಜೈನ್, ಜತೆ ಕಾರ್ಯದರ್ಶಿಗಳಾಗಿ ಹರ್ಷೇಂದ್ರ ಹೆಗ್ಡೆ, ಸಂಧ್ಯಾ ಸಿದ್ದಕಟ್ಟೆ, ಚಂದನಾ ಬೃಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸನ್ಮತಿ ಜಯಕೀರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಾಂಸ್ ಜೈನ್ ಸಹಿತ ಸಂಚಾಲಕರ ತಂಡ, ಕಾರ್ಯಕಾರಿ ಸಮಿತಿ ಅಧಿಕಾರ ಸ್ವೀಕರಿಸಿತು. ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ನಿರ್ದೇಶಕ ಪ್ರಮೋದ್ ಕುಮಾರ್ ವೇಣೂರು ಶುಭ ಹಾರೈಸಿದರು. ಗೀತಾ ಜಿನಚಂದ್ರ ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಭರತ್ ಕುಮಾರ್ ಜೈನ್ ವರದಿ ವಾಚಿಸಿದರು. ಕಾರ್ಯದರ್ಶಿ ಜಯಕೀರ್ತಿ ವೈ.ಎಸ್. ವಂದಿಸಿದರು. 65ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಜೈನ ಧರ್ಮ ಅನುಸರಿಸಿಕೊಂಡಿರುವ ಅಹಿಂಸಾ ಪರಮೋಧರ್ಮ ಇಂದಿನ ವರ್ತಮಾನ ಕಾಲಸ್ಥಿತಿಗೆ ಅವಶ್ಯಕ. ಜನಸಂಖ್ಯಾ ಬಲ ಕಡಿಮೆಯಾದರೂ ಉನ್ನತವಾದ ಸಾಮಾಜಿಕ ಸ್ಥಾನವನ್ನು ಜೈನರು ಪಡೆದಿದ್ದರು. ಬಿ.ರಮಾನಾಥ ರೈ, ಮಾಜಿ ಸಚಿವ