ಜಿಲ್ಲೆ

ವಿಮ್ಸ್ ಆಸ್ಪತ್ರೆ ವೈದ್ಯ ಡಾ.ವಿಜಯಶಂಕರ್ ಕೋವಿಡ್​ಗೆ ಬಲಿ

ಬಳ್ಳಾರಿ: ಮಹಾಮಾರಿ ಕರೊನಾ ಸೋಂಕಿಗೆ ವಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ಬಲಿಯಾಗಿದ್ದಾರೆ.

ಡಾ. ವಿಜಯಶಂಕರ್(52) ಮೃತರು. ವಿಮ್ಸ್ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದ ವಿಜಯಶಂಕರ್​ಗೆ ಕಳೆದ ವಾರದಿಂದ ಕರೊನಾ ಸೋಂಕು ತಗುಲಿತ್ತು.

ಕೆಲ ದಿನಗಳ ಕಾಲ ಹೋಮ್ ಐಸೋಲೇಷನ್​​ನಲ್ಲಿದ್ದ ಡಾ.ವಿಜಯ್​ ಶಂಕರ್​ ಅವರು ನಗರದ ಆರಾಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಡಾ.ವಿಜಯ ಶಂಕರ್​ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯದ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಡಾ. ವಿಜಯ ಶಂಕರ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.