ಬ್ರಹ್ಮಾವರ: ಸೋಮವಾರ ಸಂಜೆ ದಿಢೀರ್ ಸುರಿದ ಬಿರುಗಾಳಿ ಸಹಿತ ಮಳೆಗೆ ಇಲ್ಲಿನ ಹನೆಹಳ್ಳಿ ಬಂಡೀಮಠ ಭಾಗದ ಅನೇಕ ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಭಾರಿ ಗಾಲಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ವಿದ್ಯುತ್ ಪೂರೈಕೆಯಲ್ಲೂ ಭಾರಿ ವ್ಯತ್ಯಯ ಉಂಟಾಯಿತು. ಬಂಡೀಮಠದ ಕೊಮೇರಿ ಎಂಬಲ್ಲಿ ಹೆಂಚಿನ ಮನೆಯ ಮೇಲೆ ಮರ ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧರೊಬ್ಬರ ಕಾಲುಬೆರಳುಗಳಿಗೆ ಮೇಲೆ ಹೆಂಚಿನ ತುಂಡುಗಳು ಬಿದ್ದು ಊದಿಕೊಂಡಿವೆ. ಮತ್ತೊಬ್ಬರ ತಲೆಭಾಗಕ್ಕೆ ಹೆಂಚು ಬಿದ್ದಿದೆ.
ಮಂಗಳವಾರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಹನೆಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಹನೆಹಳ್ಳಿ ಗ್ರಾ.ಪಂ. ಸದ್ಯರಾದ ಚಂದ್ರ ಮರಕಾಲ, ಲಕ್ಷ್ಮಣ ಪೂಜಾರಿ, ಚಂದ್ರಶೇಖರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮ ಆಡಳಿತಾಧಿಕಾರಿ ವಿಶ್ವಾಸ್ ಹಾನಿಯ ವರದಿ ಅಂದಾಜು ತಯಾರಿಸಿದರು.