ಬಸವನನ್ನು ಹಿಡಿಯಲು ಸಾರ್ವಜನಿಕರು ಪ್ರಯತ್ನಿಸುತ್ತಿರುವುದು.  
ಜಿಲ್ಲೆ

ಹುಚ್ಚುನಾಯಿ ಕಚ್ಚಿದ್ದ ಬಸವ ಸೆರೆ

Karthika K.S

ಹೆಬ್ರಿ: ಕೆಳಪೇಟೆಯಲ್ಲಿ ಹುಚ್ಚು ನಾಯಿ ಕಡಿತದಿಂದ ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಬಸವನನ್ನು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶನಿವಾರ ಸೆರೆ ಹಿಡಿಯಲಾಯಿತು.

ಹೆಬ್ರಿ ಕೆಳಪೇಟೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮೇಲೆ ಬಸವ ದಾಳಿ ಮಾಡಲು ಯತ್ನಿಸಿದ್ದು, ಸಾರ್ವಜನಿಕರು ಭಯ ಪಡುತ್ತಿದ್ದರು. ವಿಚಾರ ತಿಳಿದ ದಿನೇಶ್ ಶೆಟ್ಟಿ ಹಾಗೂ ತಂಡ ಕಾರ್ಯಪ್ರವೃತ್ತರಾಗಿ ಬಸವನನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ ಸೇರಿಗಾರ್, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಬಿ.ಸುರೇಶ್, ಪಶು ಇಲಾಖೆ ವೈದ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ಸಾಕುನಾಯಿ ವಿವರ ಸಂಗ್ರಹಿಸಿ: ನಾಯಿ ಸಾಕುವವರು ತಮ್ಮ ನಾಯಿ ಹಾಗೂ ನಾಯಿಮರಿಗಳ ವಿವರಗಳನ್ನು ಪಂಚಾಯಿತಿಗೆ ಸಲ್ಲಿಸುವಂತಾಗಬೇಕು. ಹೆಣ್ಣು ನಾಯಿಮರಿಗಳನ್ನು ಬೀದಿಯಲ್ಲಿ ಬಿಡಲಾಗುತ್ತಿದ್ದು, ಇದರಿಂದ ಹೆಬ್ರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ಆಡಳಿತ ವರ್ಗ ಬೀದಿನಾಯಿಗಳ ಹಾವಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.