ತುಮಕೂರು: ಸಿದ್ಧಗಂಗಾ ಮಠದ ಪಿಯು ವಿದ್ಯಾರ್ಥಿ ಮೇಲೆ ಅಪರಿಚಿತ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಠದ ಮಕ್ಕಳಲ್ಲಿ ಭಯದ ವಾತಾವರಣ ಮೂಡಿದೆ.
ಭೀಮಶಂಕರ ಕ್ಷೇತ್ರಿ (18) ಕಾಲೇಜು ಮುಗಿಸಿಕೊಂಡು ಮಠಕ್ಕೆ ವಾಪಸಾಗುವಾಗ ಬೈಕ್ನಲ್ಲಿ ಬಂದ ಮೂವರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸಿದ್ಧಗಂಗಾ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ವಿಜಯಪುರ ಜಿಲ್ಲೆ ಹಿಂಡಿ ತಾಲೂಕಿನ ಇಂಗಳಗಿ ಗ್ರಾಮದ ಭೀಮಶಂಕರ ಮಧ್ಯಾಹ್ನ 3 ಗಂಟೆಯಲ್ಲಿ ಶನಿವಾರ ಕಾಲೇಜು ಮುಗಿಸಿ ಇಸ್ರೋ ನಿಲ್ದಾಣದಲ್ಲಿ ಬಸ್ ಇಳಿದು ಮಠಕ್ಕೆ ತೆರಳುವಾಗ ಚಾಕುವಿನಿಂದ ಹಲ್ಲೆ ನಡೆದಿದೆ.
3 ವರ್ಷದಿಂದ ಮಠದಲ್ಲಿ ಓದುತ್ತಿದ್ದು, ಹಲ್ಲೆ ನಡೆಸಿದವರು ಅಪರಿಚಿತರು ಎಂದು ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯ ಎಡಗೈಗೆ ಬಲವಾದ ಪೆಟ್ಟು ಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೈಗೆ 30 ಹೊಲಿಗೆ ಹಾಕಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.