ಜಿಲ್ಲೆ

ಸಿದ್ಧಗಂಗಾ ಬೆಟ್ಟದಲ್ಲಿ ಉಕ್ಕಿ ಹರಿದ ತೀರ್ಥೋದ್ಭವ: ಪುಣ್ಯಜಲ ಕಣ್ತುಂಬಿಕೊಳ್ಳಲು ಬರುತ್ತಿದೆ ಭಕ್ತರ ದಂಡು

arunakunigal

ತುಮಕೂರು: ಪವಿತ್ರ ಸ್ಥಳ ಸಿದ್ಧಗಂಗಾ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ತೀರ್ಥೋದ್ಭವ ಉಕ್ಕಿ ಹರಿದಿದೆ. ನಿರಂತರ ಮಳೆಗೆ ಸಿದ್ಧಗಂಗೆಯ ಪುಣ್ಯಜಲ ಉಕ್ಕಿ ಹರಿಯುತ್ತಿದ್ದು, ತೀರ್ಥೋದ್ಭವ ಸ್ಥಳ ಸಂಪೂರ್ಣವಾಗಿ ಪುಣ್ಯ ಜಲದಿಂದ ಭರ್ತಿಯಾಗಿದೆ.

ತುಮಕೂರಿನ ಸಿದ್ಧಗಂಗಾ ಮಠದ ಬೆಟ್ಟದ ಮೇಲಿರುವ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಎದುರಿಗೆ ಸಿದ್ಧಗಂಗೆ ತೀರ್ಥೋದ್ಭವ ಇದೆ. ಗೋಸಲ ಸಿದ್ದೇಶ್ವರರು ತಮ್ಮ ಪಾದದಿಂದ ಬಂಡೆಗೆ ಗುದ್ದಿ ನೀರು ಹರಿಸಿದ್ದರು. ಈ ನೀರು ಹರಿದ ಸ್ಥಳವನ್ನು ಸಿದ್ಧಗಂಗೆ ಎಂದು ಕರೆಯಲಾಗುತ್ತಿದೆ. 1300ರಿಂದ 1350 ಸಂದರ್ಭದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಗೋಸಲ ಸಿದ್ದೇಶ್ವರರು, ತಮ್ಮ 101 ಶಿಷ್ಯರೊಂದಿಗೆ ಇದೇ ಜಾಗದಲ್ಲಿ ತಪೋನುಷ್ಠಾನ ಮಾಡಿದ್ದರು. ತಪಸ್ಸು ಮಾಡಿವ ವೇಳೆ ಬಾಯಾರಿಕೆಯಾದ ಪರಿಣಾಮ ನೀರಿಗಾಗಿ ಬಂಡೆಗೆ ಕಾಲಿನಲ್ಲಿ ತಪಸ್ವಿಗಳು ಗುದ್ದಿದ್ದರು. ಖುಷಿಗಳು ಕಾಲಿನಲ್ಲಿ ಗುದ್ದಿದ ಸ್ಥಳದಲ್ಲಿ ಬಂಡೆಯಿಂದ ನೀರು ಉಕ್ಕಿತು. ಅಂದಿನಿಂದ ಇಂದಿನವರೆಗೂ ದೋಣೆಯಲ್ಲಿ ವರ್ಷವಿಡೀ ನೀರು ಇರುತ್ತೆ.

ಇದೀಗ ತುಮಕೂರಿನಲ್ಲಿ ಭರ್ಜರಿ ಮಳೆಯಾಗಿದ್ದರಿಂದ ಪುಣ್ಯಗಂಗೆ ಉಕ್ಕಿ ಹರಿಯುತ್ತಿದ್ದಾಳೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬರುತ್ತಿದೆ.