ಜಿಲ್ಲೆ

ಸಿದ್ದರಾಮಯ್ಯರಿಂದ ಸಿಟಿ ರೌಂಡ್ಸ್​​! ಮಳೆ ಹಾನಿ ಪ್ರದೇಶಗಳ ವೀಕ್ಷಣೆ

arunakunigal

ಬೆಂಗಳೂರು: ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಲು ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್​ ಮಾಡಿದರು. ಇದರ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಗಾಂಧಿನಗರ, ಶಿವಾಜಿನಗರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆ ಸೃಷ್ಟಿಸಿದ ಅವಾಂತರ, ಹಾನಿಯನ್ನು ಪರಿಶೀಲಿಸುತ್ತಿದ್ದಾರೆ.

ಸಿಟಿ ರೌಡ್ಸ್ ಹೊರಟ ಸಿದ್ದರಾಮಯ್ಯಗೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್, ಹೆಬ್ಬಾಳ ಶಾಸಕ ಬೈರತಿ ಸುರೇಶ್​ ಸಾಥ್, ಕೃಷ್ಣ ಭೈರೇಗೌಡ ಕೊಟ್ಟರು. ನಾಗವಾರದ ಎಲಿಮೆಂಟ್ ಮಾಲ್ ಬಳಿ ನೀರು ನುಗ್ಗಿರುವ ಸ್ಥಳ, ಬ್ಯಾಟರಾಯನಪುರ ಧರಣಿಸಂದ್ರದ ಫಾತಿಮಾ ಲೇಔಟ್​ನ ರಾಜಕಾಲುವೆಯನ್ನ ಪರಿಶೀಲನೆ ನಡೆಸಿದರು. ಜನವರಿ, ಫೆಬ್ರವರಿ, ಮಾರ್ಚ್​ನಲ್ಲಿ ರಾಜಕಾಲುವೆಗಳನ್ನು ಕ್ಲೀನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸಲಹೆ ನೀಡಿದರು. ಬಳಿಕ ಶಿವಾಜಿನಗರದ ಬ್ರಾಡ್ ವೇ ರಸ್ತೆಯ ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದರು.