ಜಿಲ್ಲೆ

ಚೇಳು ಕಡಿತಕ್ಕೆ ಯುವಕ ಬಲಿ! ಬದುಕುವ ಚಾನ್ಸ್​ ಇದ್ದರೂ ಆ 3 ದಿನ ಆತ ಬಳಸಿಕೊಳ್ಳಲೇ ಇಲ್ಲ...

arunakunigal

ಧಾರವಾಡ: ಚೇಳು ಕಡಿತಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಯಲ್ಲಪ್ಪ ಮೃತ ದುರ್ದೈವಿ. ಈತನಿಗೆ ಮೂರು ದಿನಗಳ ಹಿಂದೆ ಚೇಳು ಕಚ್ಚಿತ್ತು. ಚಿಕಿತ್ಸೆ ಪಡೆಯದೆ ಯಲ್ಲಪ್ಪ ನಿರ್ಲಕ್ಷ್ಯಿಸಿದ್ದ. ದೇಹಕ್ಕೆಲ್ಲ ವಿಷ ವ್ಯಾಪಸಿ ಆರೋಗ್ಯದಲ್ಲಿ ಏರುಪೇರಾಗಿತ್ತು.

ಆರೋಗ್ಯ ಹದಗೆಟ್ಟ ಹಿನ್ನೆಲೆ ಯಲ್ಲಪ್ಪನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇಳು ಕಡಿತಕ್ಕೊಳಗಾದ ದಿನವೇ ಯುವಕ ಸೂಕ್ತ ಚಿಕಿತ್ಸೆ ಪಡೆದಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲವೇನೋ. ಪರಿಸ್ಥಿತಿ ಕೈಮೀರಿದ ಮೇಲೆ ಆಸ್ಪತ್ರೆಗೆ ಹೋದನಾದರೂ ಬದುಕಿ ಬಾರಲಿಲ್ಲ.