ಬೃಹತ್ ಮರ ಬಿದ್ದ ಪರಿಣಾಮ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಂತಿಗಳು 
ಜಿಲ್ಲೆ

ಹೆಮ್ಮಾಡಿಯಲ್ಲಿ ಸ್ವಲ್ಪದರಲ್ಲೇ ಪಾರಾದ ಶಾಲಾ ಬಸ್!

ಇಂದಿರಾ ಎನ್ ಕೆ

ಗಂಗೊಳ್ಳಿ: ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳೂ ಉರುಳಿ, ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದೆ. ಇದೇ ಸಂದರ್ಭಕ್ಕೆ 20 ಮೀ. ದೂರದಲ್ಲಿ ಹಾದುಹೋದ ಶಾಲಾ ಬಸ್ ಭಾರಿ ಅನಾಹುತದಿಂದ ಪಾರಾಗಿದೆ. ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಮರ ತೆರವು ಕಾರ್ಯಾಚರಣೆ ನಡೆದಿದೆ.