ಜಿಲ್ಲೆ

ಕಂಡ ಕಂಡ ಮಹಿಳೆಯರಿಗೆ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಹಿಂಸಿಸುತ್ತಿದ್ದ ವಿಕೃತಕಾಮಿ ಬಂಧನ

arunakunigal

ಬೆಂಗಳೂರು: ಕಂಡ ಕಂಡ ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಹಿಂಸಿಸುತ್ತಿದ್ದ ಇಲ್ಲೊಬ್ಬ ವಿಕೃತ ಕಾಮಿಯನ್ನ ಆಗ್ನೇಯ ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಡಿವಾಳದ ಜೈಭೀಮ್​ ನಗರದ ಪುರುಷೋತ್ತಮ್​(40) ಬಂಧಿತ. ಪತ್ನಿ ಮತ್ತು ಮಕ್ಕಳ ಜತೆಗೆ ನೆಲೆಸಿದ್ದ ಪುರುಷೋತ್ತಮ್​, ಜೋಮ್ಯಾಟೊ ಡೆಲವರಿ ಕೆಲಸ ಮಾಡುತ್ತಿದ್ದ. ಫೇಸ್​ಬುಕ್​ ಖಾತೆ ತೆರೆದು ದೇಶ, ವಿದೇಶದ ಸುಂದರ ಮಹಿಳೆಯರಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸುತ್ತಿದ್ದ. ರಿಕ್ವೆಸ್ಟ್​ ಅನ್ನು ಓಕೆ ಮಾಡುತ್ತಿದ್ದಂತೆ ಮೇಸೆಂಜರ್​ನಲ್ಲಿ ಯುವತಿ-ಮಹಿಳೆಯರಿಗೆ ಲೈಂಗಿಕ ಉತ್ತೇಜನ ನೀಡುವ ಅಪ್ರಾಪ್ತರ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.

ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಸಿಇಎನ್​ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಇದೇ ರೀತಿ ಹಲವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ನೊಂದ ಸಂತ್ರಸ್ತೆಯರು ಸ್ನೇಹ ಕಡಿತ ಮಾಡಿಕೊಳ್ಳುತ್ತಿದ್ದರು. ವಿಕೃತ ಮನಸ್ಸಿನಿಂದ ಆರೋಪಿ ಈ ಕೃತ್ಯ ಎಸಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.