ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ಸೇವಾ ದರವನ್ನು ಪರಿಷ್ಕರಿಸಲಾಗಿದೆ.
ಮೊದಲಿದ್ದ ದರಕ್ಕಿಂತ ಒಂದು ಸಾವಿರ ರೂಪಾಯಿ ಹೆಚ್ಚಳ ಆಗಿದೆ. ಅಂದರೆ 3,200 ರೂಪಾಯಿಯಿಂದ 4,200 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಡುವ ದೇವಳದಲ್ಲಿ ಸರ್ಪ ದೋಷ ನಿವಾರಣೆಗಾಗಿ ನಡೆಸುವ ಸರ್ಪ ಸಂಸ್ಕಾರ ಸೇವೆಯ ಸೇವಾ ದರವನ್ನು ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ದರ ಪರಿಷ್ಕರಿಸಲಾಗಿದೆ. ಭಕ್ತರು ಸಹಕರಿಸಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.