ಬೆಳಗಾವಿ: ಕಾಗವಾಡ ತಾಲೂಕಿನ ಐನಾಪುರ ಗ್ರಾಮಸ್ಥರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಅಚ್ಚರಿ ಕಾದಿತ್ತು. ಗ್ರಾಮದ ಸಂತುಬಾಯಿ ದೇವಿಯ ವಿಗ್ರಹ ಕಣ್ಣು ತೆರೆದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ದೇವರನ್ನ ನೋಡಲು ಜನ ನಾ ಮುಂದು- ತಾ ಮುಂದು ಎಂಬಂತೆ ಸಾಲುಗಟ್ಟಿದ್ದರು.
ರಾತೋರಾತ್ರಿ ದೇವಿಯೇ ಕಣ್ಣು ಬಿಟ್ಟಳಾ ಅಥವಾ ಕಣ್ಣು ಬಿಡಿಸಿದರಾ? ಎಂಬುದು ಗೊತ್ತಿಲ್ಲ. ಸ್ಥಳೀಯರು ಮಾತ್ರ ಸಾಕ್ಷಾತ್ ದೇವಿಯೇ ಕಣ್ಣು ತೆರೆದಿದ್ದಾಳೆ. ಕರೊನಾ ತೊಲಗುವ ಶುಭ ಸುದ್ದಿಯ ಸಂಕೇತ ಎಂದು ಬಣ್ಣಿಸಿದ್ದಾರೆ.