ಜಿಲ್ಲೆ

ದೋಷಿತ ಸಂಸ್ಥೆಗಳಿಗೆ ಸಕ್ಷಮ ಪ್ರಾಧಿಕಾರ ನೇಮಕ: ಪ್ರಶ್ನೆಗಳಿದ್ದರೆ ಮಾಹಿತಿ ನೀಡಿ

arunakunigal

ಬೆಂಗಳೂರು: ಕಣ್ಣ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಲಿ., ಗುರುಸಾರ್ವಭೌಮ ಸೌಹಾರ್ದ ಕ್ರೆಡಿಟ್ ಸೊಸೈಟಿ, ಗೃಹ ಕಲ್ಯಾಣ್ ಕಂಪನಿ, ಶ್ರೇಯಸ್ ಫೈನಾನ್ಸ್ ಇನ್‌ವೆಸ್ಟ್‌ಮೆಂಟ್ ಹಾಗೂ ಅಜ್ಮೀರಾ ಗ್ರೂಪ್ ಆಫ್​ ಕಂಪನಿಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಎಂಡಿ ಅವರನ್ನು ಸಕ್ಷಮ ಪ್ರಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004 ಕಲಂ 5(1) ರಡಿಯಲ್ಲಿ ದೂಷಿತ ಸಂಸ್ಥೆಗಳಿಗೆ ಅಧಿಕಾರಿಯನ್ನು ನೇಮಿಸಲಾಗಿದೆ. ಕೆಲ ಖಾಸಗಿ ವ್ಯಕ್ತಿಗಳು ದೂಷಿತ ಕಂಪನಿಗಳಿಂದ ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಕೊಡಿಸುವುದಾಗಿ ಆಮಿಷವೊಡ್ಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ, ಹೂಡಿಕೆದಾರರು ಯಾವುದೇ ಕಾರಣಕ್ಕೂ ಅಂಥವರನ್ನು ಸಂಪರ್ಕಿಸಿ ಮೋಸ ಹೋಗಬಾರದು ಎಂದು ಸರ್ಕಾರ ಸಲಹೆ ನೀಡಿದೆ.

ದೂಷಿತ ಕಂಪನಿಗಳ ವಿಚಾರದ ಕುರಿತು ಯಾವುದೇ ಪ್ರಶ್ನೆ ಮತ್ತು ಸಂದೇಹಗಳಿದ್ದರೆ ಹೆಚ್ಚಿನ ವಿವರಕ್ಕಾಗಿ ಸಕ್ಷಮ ಪ್ರಾಧಿಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಕಂದಾಯ ಭವನ ಹಿಂಭಾಗ, ಕೆಂಪೇಗೌಡ ರಸ್ತೆ, ಬೆಂಗಳೂರು-09 ಭೇಟಿ ನೀಡಬಹುದು. ಟೋಲ್ ಫ್ರೀ ಸಂಖ್ಯೆ 1800 4250 212ಕ್ಕೆ. cmdkplc@gmail.com, www.kplc.kar ಸಂಪರ್ಕಿಸಿ.