ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಿಲ್ಲವ ಮಹಾಜನ ಸೇವಾಸಂಘದ ಅಶೋಕ್‌ಪೂಜಾರಿ , ಮಹಿಳಾ ಸಂಘದ ಗಿರಿಜಾ ಮಾಣಿ ಗೋಪಾಲ ಮೊದಲಾದವರಿದ್ದರು.  
ಜಿಲ್ಲೆ

ಸಮಾಜದ ಜನತೆಗೆ ಸಮಾನತೆ ಸಂದೇಶವಿತ್ತ ಸಂತ

ಕುಂದಾಪುರ : ಜಗತ್ತಿಗೆ ಸಮಾನತೆ ಮಾರ್ಗದರ್ಶನ ಮಾಡಿದ ನಾರಾಯಣ ಗುರುಗಳ ಆದರ್ಶ ಸಮಾಜಮುಖಿ ಕೆಲಸ ಮಾಡುವವರಿಗೆ ಪ್ರೇರಣೆ ನೀಡುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.

ಮಂಗಳವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಮೊದಲು ಎಂದು ನಾವು ನಂಬುವವರೆಗೂ ಸುಖದ ಜೀವನ ಸಾಧ್ಯವಾಗುವುದಿಲ್ಲ.ನಾರಾಯಣ ಗುರುಗಳ ಜನ್ಮದಿನಾಚರಣೆ ಮೂಲಕ ನಾವು ಸಂಘಟಿತರಾಗಬೇಕು ಎಂದರು.

ಕುಂದಾಪುರ ಬಿಲ್ಲವ ಮಹಾಜನ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನಾರಾಯಣ ಗುರುಗಳಿಗೆ ಎಂದೋ ಸಿಗಬೇಕಾಗಿದ್ದ ಪ್ರಾಮುಖ್ಯತೆ ಬಹಳಷ್ಟು ವರ್ಷಗಳ ನಂತರ ಸಿಕ್ಕಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಪ್ರಸ್ತಾವಿಕ ಮಾತುಗಳನ್ನಾಡಿದರು.ಕುಂದಾಪುರ ಎಸಿ ಕೆ.ಮಹೇಶ್ ಚಂದ್ರ, ತಾಪಂ. ಇಒ ಶಶಿಧರ.ಕೆ.ಜಿ, ಕುಂದಾಪುರ ಬಿಲ್ಲವ ಸಮಾಜ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ ಮಾಣಿ ಗೋಪಾಲ, ಕುಂದಾಪುರ ನಾರಾಯಣ ಗುರು ಯುವಕಮಂಡಲ ಅಧ್ಯಕ್ಷ ಸಂದೇಶ್ ಉಪಸಿತರಿದ್ದರು.

ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್ ಸ್ವಾಗತಿಸಿದರು. ಉಪತಹಸೀಲ್ದಾರ್ ವಿನಯ್ ನಿರೂಪಿಸಿದರು. ಗಣೇಶ ಅರಸಮ್ಮಕಾನು ವಂದಿಸಿದರು.