ಕುಂದಾಪುರ: ಖಾಸಗಿ ಬಸ್‌ಗಳು ಕೋಟೇಶ್ವರದ ಒಳಪೇಟೆ ರಸ್ತೆಯಲ್ಲಿ ಸಂಚರಿಸುವ ವ್ಯವಸ್ಥೆ ಕಲ್ಪಿಸುವಂತೆ ಕೋಟೇಶ್ವರದ ನಾಗಸರಿಕರು ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಹಿಂದೆ ಖಾಸಗಿ ಬಸ್ ಕೋಟೇಶ್ವರದ ಒಳಪೇಟೆ ರಸ್ತೆ ಮೂಲಕ ಹೋಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ವ್ಯವಹಾರ ಉದ್ಯಮಗಳಿಗೆ ಹಾಗೂ ಇತರರಿಗೆ ಅನುಕೂಲಕರವಾಗಿತ್ತು. ನಂತರ ಏಕಾಏಕಿ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದು ವಿದ್ಯಾರ್ಥಿಗಳಿಗೆ ಸಂಚರಿಸಲು ಬಸ್ ಇಲ್ಲದೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಹಿಂದೆ ಇರುವ ಹಾಗೆ ಖಾಸಗಿ ಬಸ್‌ಗಳು ಕೋಟೇಶ್ವರದ ಒಳಪೇಟೆಯಲ್ಲಿ ಸಂಚರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು. ಕೋಟೇಶ್ವರ ಭಾಗದ ಪ್ರಮುಖರು ಉಪಸ್ಥಿತರಿದ್ದರು.