ಜಿಲ್ಲೆ

ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರದಬ್ಬಿದ ಕಾಲೇಜು ಆಡಳಿತ ಮಂಡಳಿ

ಬೆಳಗಾವಿ: ಕರಾವಳಿಗೆ ಸೀಮಿತವಾಗಿದ್ದ ಹಿಜಾಬ್​ ವಿವಾದ ಇದೀಗ ಗಡಿ ಜಿಲ್ಲೆ ಬೆಳಗಾವಿಗೂ ವ್ಯಾಪಿಸಿದೆ.

ರಾಮದುರ್ಗ ತಾಲೂಕಿನ ಸರ್ಕಾರಿ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಗುರುವಾರ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿದ್ದರು. ಕಾಲೇಜು​ ಆಡಳಿತ ಮಂಡಳಿಯು ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳು ತೊಟ್ಟಿದ್ದ ಶಾಲು ತೆಗೆಸಲು ಯತ್ನಿಸಿದ್ದಾರೆ. ಶಾಲು ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳಿನ್ನು ತರಗತಿಯಿಂದಲೇ ಹೊರದಬ್ಬಲಾಗಿದೆ.

ಈ ಘಟನೆಯನ್ನು ಕಾಲೇಜು​ ಆಡಳಿತ ಮಂಡಳಿ ಮುಚ್ಚಿಹಾಕಿತ್ತು. ಆದರೆ, ಮೊಬೈಲ್​ನಲ್ಲಿ ಈ ಘಟನೆಯ ಫೋಟೋ ತೆಗೆದಿದ್ದ ಇತರ ವಿದ್ಯಾರ್ಥಿಗಳು ವೈರಲ್​ ಮಾಡಿದ್ದರಿಂದ ಶುಕ್ರವಾರ ಈ ವಿದ್ಯಮಾನ ಬೆಳಕಿಗೆ ಬಂದಿದೆ.