ಹಳನೀರು ಎಂಬಲ್ಲಿ ಹೆಬ್ಬಾವು ಕಾಳಿಂಗಸರ್ಪದ ತಲೆಯನ್ನು ನುಂಗಿರುವುದು  
ಜಿಲ್ಲೆ

ಕಾಳಿಂಗಸರ್ಪವನ್ನೇ ನುಂಗಲು ಹವಣಿಸಿದ ಹೆಬ್ಬಾವು

ಇಂದಿರಾ ಎನ್ ಕೆ

ಗಂಗೊಳ್ಳಿ: ಕಾಳಿಂಗಸರ್ಪವನ್ನೇ ಹೆಬ್ಬಾವೊಂದು ನುಂಗಲು ಹವಣಿಸಿದ್ದು, ಕೊನೆಗೂ ಅದರಲ್ಲಿ ವಿಫಲವಾದ ಘಟನೆ ಜಡ್ಕಲ್ ಗ್ರಾಮದ ಹಳನೀರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಕೊನೆಗೆ ಎರಡೂ ಹಾವುಗಳನ್ನು ಬೇರ್ಪಡಿಸಿ, ಅಂಪಾರಿನ ಸ್ನೇಕ್ ಶಂಕರ್, ಸ್ಥಳೀಯರ ಸಹಕಾರದೊಂದಿಗೆ ಅವುಗಳನ್ನು ಹಿಡಿದು, ಆನೆಝರಿ ಕಡೆಗೆ ಕೊಂಡೊಯ್ದು ಬಿಟ್ಟಿದ್ದಾರೆ. ಹಳನೀರಿನ ಮುತ್ತಮ್ಮ ಶೆಡ್ತಿ ಅವರ ಮನೆ ಹತ್ತಿರದ ಗದ್ದೆಯಲ್ಲಿ ಹೆಬ್ಬಾವು ಕಾಳಿಂಗಸರ್ಪದ ತಲೆ ನುಂಗಿದ್ದು, ಬಳಿಕ ನುಂಗಲು ಆಗದೇ, ಸರ್ಪವನ್ನು ಸುತ್ತು ಹಾಕಲು ಪ್ರಯತ್ನಿಸುತ್ತಿದ್ದರೆ, ಹೆಬ್ಬಾವಿನ ಬಾಲವನ್ನು ಕಾಳಿಂಗ ಸರ್ಪವೂ ಸುತ್ತು ಹಾಕಿಕೊಂಡಿತ್ತು. ಈ ವೇಳೆ ಸ್ಥಳೀಯರು ಗಮನಿಸಿ, ಕೂಡಲೇ ಸ್ನೇಕ್ ಶಂಕರ್‌ಗೆ ಮಾಹಿತಿ ನೀಡಿದ್ದಾರೆ.