ಜಿಲ್ಲೆ

PSI ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ, ಆರ್.ಹಿತೇಂದ್ರಗೆ ಹೆಚ್ಚುವರಿ ಹೊಣೆ

arunakunigal

ಬೆಂಗಳೂರು: ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮ ರಾಜ್ಯದಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಬಗೆದಷ್ಟು ಆಳ ಎಂಬಂತೆ ಒಂದೊಂದೇ ಅಕ್ರಮ ಬಯಲಾಗುತ್ತಿದ್ದು, ಈ ಸಂಬಂಧ ಮೊದಲ ತಲೆದಂಡವಾಗಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನ ವರ್ಗಾವಣೆ ಮಾಡಿದ್ದು, ಆ ಜಾಗಕ್ಕೆ ಆರ್.ಹಿತೇಂದ್ರ ಅವರನ್ನ ನೇಮಿಸಲಾಗಿದೆ.

1995ರ ಬ್ಯಾಚ್​ನ ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನು ಇದೀಗ ಸೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಿಂದ ಎತ್ತಂಗಡಿ ಮಾಡಿ ಆಂತರಿಕ ಭದ್ರತಾ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಆರ್.ಹಿತೇಂದ್ರ ಅವರು ಸದ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದು, ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ. ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದಲ್ಲಿ ಅಮೃತ್​ ಪೌಲ್​ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್​ ಗಂಭೀರ ಆರೋಪ ಮಾಡಿತ್ತು.