ಜಿಲ್ಲೆ

ಸಚಿವ ನಾಗೇಶ್​ ಮನೆ ಮುಂದೆ ಪ್ರತಿಭಟನೆ ಪ್ರಕರಣ: ಷರತ್ತುಬದ್ಧ ಜಾಮೀನು ಮೇಲೆ 24 ಆರೋಪಿಗಳ ಬಿಡುಗಡೆ

ತುಮಕೂರು: ನೂತನ ಪಠ್ಯ ಪರಿಷ್ಕರಣೆ ವಿವಾದ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ ಎನ್​ಎಸ್​ಐಯುನ 24 ಕಾರ್ಯಕರ್ತರು ಜಾಮೀನನ ಮೇಲೆ ಗುರುವಾರ ಹೊರ ಬಂದಿದ್ದಾರೆ.

ತುಮಕೂರು ಜಿಲ್ಲಾ ಕಾರಾಗೃಹದಲ್ಲಿ 9 ದಿನ ಜೈಲುವಾಸ ಅನುಭವಿಸಿದ್ದ NSUI ಕಾರ್ಯಕರ್ತರನ್ನು ಷರತ್ತುಬದ್ಧ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ NSUI ರಾಜ್ಯಾಧ್ಯಕ್ಷ ಕೀರ್ತಿಗಣೇಶ್, ರಾಜ್ಯ ಸರ್ಕಾರ ಆರ್​ಎಸ್​ಎಸ್ ಮಾತು ಕೇಳಿ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ವಿಚಾರಧಾರೆಗಳನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿದೆ. ಹಾಗಾಗಿ ನಾವು ಆರ್​ಎಸ್​ಎಸ್​ ಚಡ್ಡಿ ಸುಟ್ಟಿದ್ದೀವಿ. ಆರ್​ಎಸ್ಎಸ್ ವಿರುದ್ಧ ಪ್ರತಿಭಟನೆ ನಡೆಸಿದ್ದೀವಿ. ಈ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಸದಾ ನಮ್ಮ ಜೊತೆ ಇದ್ದರು. ದೇಶಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದು ಹೆಮ್ಮೆ ಇದೆ. ಮುಂದಿನ ಹೋರಾಟದ ರೂಪುರೇಷೆಯನ್ನ ಸದ್ಯದಲ್ಲೇ ರೂಪಿಸ್ತೀವಿ ಎಂದರು.