ತುಮಕೂರು: ತರಕಾರಿ, ಹಣ್ಣು, ಕಾಳು, ಸೊಪ್ಪುಗಳಿಂದಲೇ ಮಾನವ ದೇಹದ ಚಿತ್ರ ರಚಿಸಿ ಪ್ರೌಢಶಾಲೆ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಇದು ಅಂತಿಂಥ ಚಿತ್ರವಲ್ಲ, ಯಾವುದನ್ನು ತಿಂದರೆ ಅದು ದೇಹದ ಯಾವ ಭಾಗಕ್ಕೆ ಉಪಯಕ್ತ, ಪೋಷಕಾಂಶ ಆಹಾರ ಯಾವುದು? ಎಂಬುದನ್ನ ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ.
ಅಂದಹಾಗೆ ಈ ದೃಶ್ಯ ಕಂಡು ಬಂದದ್ದು ತುಮಕೂರು ತಾಲೂಕಿನ ಸಿರಿವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ. ಶುಕ್ರವಾರ ಪೋಷಣಾ ಅಭಿಯಾನ ಆಚರಿಸಲಾಯಿತು.
ಅಭಿಯಾನದ ಅಂಗವಾಗಿ 10ನೇ ತರಗತಿ ವಿದ್ಯಾರ್ಥಿಗಳು ಬಾದಾಮಿ, ಒಂದೆಲಗ, ಸೊಪ್ಪು, ಮೆಣಸು, ಟೊಮ್ಯಾಟೊ, ಬೀಟ್ರೂಟ್. ಬೀನ್ಸ್... ಪೋಷಕಾಂಶಯುಕ್ತ ತರಕಾರಿ ಹಣ್ಣುಗಳನ್ನ ಬಳಸಿ ಮಾನವನ ದೇಹ ಚಿತ್ರ ರಚಿಸಿದ್ದರು. ಉಪ ಪ್ರಾಂಶುಪಾಲರಾದ ಚೇತನಾ ಜಿ.ಟಿ., ಶಿಕ್ಷಕರಾದ ಉಮೇಶ್ ಸಿ.ಕೆ., ತುಕಾರಾಮ್ ಕೆ.ವಿ., ಕಾವ್ಯಾ ಕೆ., ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.