ಜಿಲ್ಲೆ

ರಸ್ತೆ ಬದಿ ನೇಣುಬಿಗಿದ ಸ್ಥಿತಿಯಲ್ಲಿ ಪೊಲೀಸಪ್ಪನ ಪತ್ನಿ ಶವ ಪತ್ತೆ!

arunakunigal

ದಾವಣಗೆರೆ: ಹರಿಹರ ತಾಲೂಕಿನ‌ ಕೊಂಡಜ್ಜಿ‌ ಗ್ರಾಮದ ರಸ್ತೆ ಬದಿ ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸಪ್ಪನ ಪತ್ನಿಯ ಶವ ಪತ್ತೆಯಾಗಿದೆ.

ಶಿಂಗ್ರಿಹಳ್ಳಿ ದೊಡ್ಡ ತಾಂಡ ನಿವಾಸಿ ನಿರ್ಮಲಾ ಬಾಯಿ(44) ಮೃತ ದುದೈರ್ವಿ. ಕೊಂಡಜ್ಜಿ‌‌- ಉದಯಪುರ ಗ್ರಾಮದ ರಸ್ತೆ ಬದಿ ಶನಿವಾರ ಬೆಳಗ್ಗೆ ಶವ ಪತ್ತೆಯಾಗಿದೆ. ನಿರ್ಮಲಾ ಬಾಯಿ ಗಂಡ ಕುಬೇರನಾಯ್ಕ ಪೊಲೀಸ್ ಆಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ.

ಯಾರೋ ಕೊಲೆ ಮಾಡಿ ಶವವನ್ನು ರಸ್ತೆಬದಿ ನೇಣುಹಾಕಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹರಿಹರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.