ಕಂಪ್ಲಿ ತಾಲೂಕಿನ ದೇವಸಮುದ್ರ ಸಹಿಪ್ರಾ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಛದ್ಮವೇಷ ಧರಿಸಿ ಗಮನಸೆಳೆದರು. ಎಸ್ಡಿಎಂಸಿ ಅಧ್ಯಕ್ಷ ವಿ.ವೆಂಕಟೇಶಲು, ಇಸಿಒ ಈರೇಶ್, ಮುಖ್ಯಶಿಕ್ಷಕ ಎಚ್.ದೊಡ್ಡಬಸಪ್ಪ, ಬಿಆರ್‌ಪಿ ರೂಪಾ, ಶಿಕ್ಷಕ ಸಂಘದ ಅಧ್ಯಕ್ಷ ಹನುಮಂತಪ್ಪ ಇತರರಿದ್ದರು. 
ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ: ಎಸ್ಡಿಎಂಸಿ ಅಧ್ಯಕ್ಷ ವಿ.ವೆಂಕಟೇಶಲು ಅನಿಸಿಕೆ

Gangavati - Desk - Veeresh S Ullagaddi

ಕಂಪ್ಲಿ: ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ವಿ.ವೆಂಕಟೇಶಲು ಹೇಳಿದರು.


ತಾಲೂಕಿನ ದೇವಸಮುದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದಲ್ಲಿಯೇ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಮುಂದಾಗಬೇಕು. ಪಠ್ಯಕ್ಕೆ ಸೀಮಿತರಾಗದೆ ಪಠ್ಯೇತರ ಚಟವಟಿಕೆಗಳಲ್ಲಿಯೂ ಭಾಗವಹಿಸಬೇಕು ಎಂದರು.


ಶಿಕ್ಷಣ ಸಂಯೋಜಕ ಈರೇಶಿ ಮಾತನಾಡಿ, 17 ಶಾಲೆಗಳ 275 ಕ್ಕೂ ಹೆಚ್ಚಿನ ಮಕ್ಕಳು 43 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯೊಂದಿಗೆ ಕ್ರಿಯಾಶೀಲತೆಯನ್ನು ಪ್ರೇರೇಪಿಸುತ್ತದೆ ಎಂದರು.


ಮುಖ್ಯಶಿಕ್ಷಕ ಎಚ್.ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಹನುಮಂತಪ್ಪ, ಬಿಆರ್‌ಪಿ ರೂಪಾ, ಮುಖ್ಯಶಿಕ್ಷಕರಾದ ರಾಮಚಂದ್ರರಾವ್, ಯಂಕನಗೌಡ, ವಾರದ ಅಂಬರೀಶ್, ಎಚ್.ಜಡೆಪ್ಪ, ಎಂ.ಎನ್.ರಾಜಣ್ಣ, ಎಚ್.ಎಫ್.ಪಾಟೀಲ್, ಮನೋರಮಾ, ಶಿಕ್ಷಣ ಪ್ರೇಮಿ ವಿಶ್ವನಾಥ ಇತರರಿದ್ದರು.


ಸುಗ್ಗೆನಹಳ್ಳಿ : ತಾಲೂಕಿನ ಸುಗ್ಗೆನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ್, ಸಿಆರ್‌ಪಿಗಳಾದ ಭೂಮೇಶ್ವರ, ರೇಣುಕಾರಾಧ್ಯ, ಹನುಮಂತಪ್ಪ, ಮುಖ್ಯಶಿಕ್ಷಕ ಪ್ರವೀಣ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ನೌಕರ ಸಂಘದ ಕಾರ್ಯದರ್ಶಿ ಎಚ್.ದೊಡ್ಡಬಸಪ್ಪ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಶಿಕ್ಷಕರಾದ ಸುಲೋಚನಾ ಎಚ್.ಎಂ, ಮುಖಂಡ ಬಿ.ರಾಮಾಂಜನಿ, ತಿಪ್ಪಯ್ಯ ಇತರರಿದ್ದರು.