ತುಮಕೂರು: ತಮ್ಮ ಊರಿನ ಕೆರೆ ಕೋಡಿ ಬಿದ್ದ ಖುಷಿಗೆ ಗ್ರಾಮದ ಮಹಿಳೆಯರು ಕೆರೆ ನೀರಲ್ಲೇ ನಿಂತು ಭರ್ಜರಿ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯರ ಸಂತಸ ಕಂಡು ನೆಟ್ಟಿಗರೂ ಖುಷಿಯಾಗಿದ್ದಾರೆ.
ಇತ್ತೀಚಿಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಾವಗಡ ತಾಲೂಕಿನ ಗೌಡನಕುಂಟೆ ಗ್ರಾಮದ ಕೆರೆ ಕೋಡಿಯಾಗಿದೆ. ಬರೋಬ್ಬರಿ 42 ವರ್ಷದ ಬಳಿಕ ಈ ಕೆರೆ ಕೋಡಿ ಬಿದ್ದಿದ್ದು, ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲ. ಕೆರೆ ಕೋಡಿ ಬಿದ್ದ ಸಂಭ್ರಮದಲ್ಲಿ ಗೌಡನಕುಂಟೆ ಗ್ರಾಮದ ಮಹಿಳೆಯರು ಮಳೆ ನೀರಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ವೃದ್ಧೆಯರಿಂದ ಹಿಡಿದು ಹೆಣ್ಣುಮಕ್ಕಳೂ ನೀರಲ್ಲಿ ಡಾನ್ಸ್ ಮಾಡಿದ್ದು, ಸ್ಥಳೀಯರ ಮೊಬೈಲ್ನಲ್ಲಿ ಈ ದೃಶ್ಯ ಸೆರೆಯಾಗಿದೆ.