ಜಿಲ್ಲೆ

ಸಹಸ್ರಾರು ಜನರ ಹೃದಯದಲ್ಲಿ ಸಿದ್ಧಗಂಗಾ ಶ್ರೀಗಳು ಅಮರ: ಪ್ರಧಾನಿ ಮೋದಿ

arunakunigal

ತುಮಕೂರು: ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪೂಜ್ಯರು ನೀಡಿದ ಪ್ರಾಮುಖ್ಯತೆ ಮತ್ತು ಸರಿಸಾಟಿಯಿಲ್ಲದ ಅವರ ಸಾಮಾಜಿಕ ಸೇವೆ ಸದಾ ಚಿರಸ್ಮರಣಿಯ. ಇಂದು ಶ್ರೀಗಳ 115ನೇ ಜಯಂತಿ. ಪೂಜ್ಯರಿಗೆ ಗೌರವ ನಮನ ಸಲ್ಲಿಸುವೆ. ಅವರ ಕನಸುಗಳನ್ನು ಈಡೇರಿಸಲು ನಾವೆಲ್ಲಾ ಶ್ರಮಿಶೋಣ ಎಂದು ಟ್ವೀಟ್​ ಮಾಡಿದ್ದಾರೆ. ಕನ್ನಡದಲ್ಲಿ ಟ್ವೀಟ್​ ಮಾಡಿರುವ ಪ್ರಧಾನಿ, ಡಾ.ಶಿವಕುಮಾರ ಸ್ವಾಮೀಜಿ ಅವರು ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.