ದಾವಣಗೆರೆ: ನಾನು ಹಲವಾರು ಜನ್ಮದಲ್ಲಿ ಪುಣ್ಯ ಮಾಡಿದ್ದೆ ಅನಿಸುತ್ತೆ. ಅದಕ್ಕಾಗಿ ನನ್ನ ಪತಿಯಾಗಿ ರೇಣುಕಾಚಾರ್ಯ ಸಿಕ್ಕಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಪತ್ನಿ ಸುಮಿತ್ರಾ ಮನಬಿಚ್ಚಿ ಮಾತನಾಡಿದ್ದಾರೆ.
ಕರೊನಾ ಅಂದ್ರೆ ಮಾರುದ್ದ ಓಡುವವರೇ ಹೆಚ್ಚು. ಆದ್ರೆ ಕರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ನಿತ್ಯ ಒಂದಿಲ್ಲೊಂದು ಕಾರ್ಯದ ಮೂಲಕ ಶಾಸಕರು ಗಮನ ಸೆಳೆಯುತ್ತಿದ್ದಾರೆ. ಮುಂದುವರಿದ ಭಾಗವಾಗಿ ಇಂದು ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೃತ್ಯುಂಜಯ, ಧನ್ವಂತರಿ ಹೋಮಕ್ಕೆ ನಡೆಸಲಾಗಿದೆ, ಖುದ್ದು ರೇಣುಕಾಚಾರ್ಯ ದಂಪತಿ ಉಪಸ್ಥಿತರಿದ್ದರು. ಈ ವೇಳೆ ತನ್ನ ಗಂಡನ ಬಗ್ಗೆ ಸುಮಿತ್ರಾ ಪ್ರಶಂಸಿಸಿದ್ದಾರೆ. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯದ ಬಗ್ಗೆ ಮೊದಲು ನನಗೂ ಭಯವಾಗಿತ್ತು. ನಮ್ಮ ಮನೆಯವರ ಜತೆ ವಾಸ್ತವ್ಯದಲ್ಲಿ ನಾನೂ ಭಾಗಿಯಾದ ಬಳಿಕ ನನಗೆ ಧೈರ್ಯ ಬಂದಿದೆ. ವಿಶ್ರಾಂತಿ ಇಲ್ಲದೆ ನಿರಂತರವಾಗಿ ಕೆಲಸ ಮಾಡ್ತಾರೆ. ಜನ ಸೇವೆಗಾಗಿ ತಮ್ಮೆಲ್ಲ ಸಮಯ ಮೀಸಲಿಟ್ಟಿದ್ದಾರೆ. ನಾನೂ ಸಹ ನನ್ನ ಯಜಮಾನರ ಜತೆ ವಾಸ್ತವ್ಯ ಹೂಡಿದ್ದೇನೆ. ಸೋಂಕಿತರ ಜತೆ ಇದ್ದು ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತಿದೆ. ರೇಣುಕಾಚಾರ್ಯ ಅವರು ನನ್ನ ಗಂಡನಾಗಿ ಸಿಕ್ಕಿದ್ದು ನನ್ನ ಹಿಂದಿನ ಜನ್ಮದ ಪುಣ್ಯದ ಫಲ ಎಂದು ರೇಣುಕಾಚಾರ್ಯರ ಬಗ್ಗೆ ಸುಮಿತ್ರಾ ಹೆಮ್ಮೆಯಿಂದ ಹೇಳಿದರು.