ಜಿಲ್ಲೆ

ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ

arunakunigal

ಮೈಸೂರು: ತಾಳಿ ಕಟ್ಟಿದ ಗಂಡನನ್ನು ತೊರೆದು ಅತ್ತೆ ಮಗನೊಂದಿಗೆ ವಾಸವಿದ್ದ ಯುವತಿ ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆಯಾದ ಘಟನೆ ಮೈಸೂರಿನ ಬೆಳವಾಡಿಯಲ್ಲಿ ಸಂಭವಿಸಿದೆ.

ಪ್ರೀತಿ ಕುಮಾರಿ(25) ಮೃತ ದುರ್ದೈವಿ. ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರೀತಿಕುಮಾರಿ ಗಂಡನನ್ನು ತೊರೆದು ಅತ್ತೆ ಮಗ ಕಿರಣ್ ಜತೆ ಬಂದಿದ್ದಳು. ಇವರಿಬ್ಬರೂ ಮೈಸೂರಿನ ಬೆಳವಾಡಿಯಲ್ಲಿ ವಾಸವಿದ್ದರು.

ಕಿರಣ್ ಕಿರುಕುಳ ಹೆಚ್ಚಾದ ಹಿನ್ನೆಲೆ ಬೇಸತ್ತ ಪ್ರೀತಿಕುಮಾರಿ, ನಿನ್ನನ್ನು ಬಿಟ್ಟು ಹೋಗ್ತೀನಿ ಎಂದು ಕಿರಣ್​ಗೆ ಹೇಳಿದ್ದಳು. ಇದಕ್ಕೆ ಕುಪಿತಗೊಂಡ ಕಿರಣ್, ಆಕೆ ಮೇಲೆ ಮಚ್ಚಿನಿಂದ ಮನಸೋಇಚ್ಛೆ ಕೊಚ್ಚಿಹಾಕಿ ಕೊಲೆ ಮಾಡಿದ್ದಾನೆ. ವಿಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.