ಹುಬ್ಬಳ್ಳಿ: ಜೊಮಾಟೊ ಮೂಲಕ ಆನ್ಲೈನ್ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್ನ ಬ್ಲೇಡ್ನ ತುಂಡು ಸಿಕ್ಕಿದೆ.
ನಗರದ ಮಲ್ಲಿಕಾರ್ಜುನ ಎಂಬುವರು ಜೊಮಾಟೊ ಆ್ಯಪ್ ಮೂಲಕ ವಿದ್ಯಾನಗರದ ಹೊಟೇಲ್ವೊಂದರಲ್ಲಿ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ತಂದುಕೊಟ್ಟ ಚಿಕನ್ ಸುಕ್ಕಾವನ್ನು ತಿನ್ನುವಾಗ ಮಿಕ್ಸರ್ ಗ್ರೈಂಡರ್ನ ಬ್ಲೇಡ್ ಸಿಕ್ಕಿದೆ.
ಕೂಡಲೇ ಎಚ್ಚೆತ್ತ ಮಲ್ಲಿಕಾರ್ಜುನ, ಈ ಬಗ್ಗೆ ಜೂಮಾಟೋ ಆ್ಯಪ್ ಮತ್ತು ಹೋಟೆಲ್ನವರ ಬಳಿ ವಿಚಾರಿಸಿದ್ದಾರೆ. ಆದರೆ, ಅವರು ಹಾರಿಕೆ ಉತ್ತರ ಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.