ಜಿಲ್ಲೆ

ಉಮೇಶ್​ ಕತ್ತಿ ಪಾರ್ಥಿವ ಶರೀರ ಸಾಗಿಸಲು ಆರ್ಮಿ ವಾಹನ ಸಜ್ಜು

ಬೆಳಗಾವಿ: ಹೃದಯಾಘಾತದಿಂದ ನಿಧನವಾಗಿರುವ ಸಚಿವ ಉಮೇಶ್​ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹುಟ್ಟೂರು ಬೆಲ್ಲದ ಬಾಗೇವಾಡಿವರೆಗೆ ಸಾಗಿಸಲು ಆರ್ಮಿ ವಾಹನವನ್ನು ಜಿಲ್ಲಾಡಳಿತ ಸಜ್ಜುಗೊಳಿಸಿದೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಲ್ಲದ ಬಾಗೇವಾಡಿವರೆಗೆ 50 ಕಿ.ಮೀ.ಗಿಂತಲೂ ಹೆಚ್ಚು ದೂರು ಇರುವುದರಿಂದ‌ ಆರ್ಮಿ ವಾಹನ ಸಜ್ಜುಗೊಳಿಸಲಾಗಿದೆ. ಬೆಂಗಳೂರಿನಿಂದ ಪಾರ್ಥಿವ ಶರೀರ ತರುವುದು ತಡವಾಗುತ್ತಿರುವ ಹಿನ್ನೆಲೆ ತೆರೆದ ವಾಹನ ಸಂಚಾರವನ್ನು ರದ್ದು ಪಡಿಸಲಾಗಿದೆ.