ಜಿಲ್ಲೆ

ಕರೊನಾ ಸೋಂಕಿತರ ಮನೆಗೆ ಬಂದು ವೈದ್ಯಕೀಯ ನೆರವು ನೀಡುತ್ತಿದೆ ಮೆಡಿಕಲ್​ ವಿದ್ಯಾರ್ಥಿಗಳ ತಂಡ

arunakunigal

ಮೈಸೂರು: ಕರೊನಾ ಮಣಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ವಿಭಿನ್ನ ಕೆಲಸ ಮಾಡುತ್ತಿದೆ. ಹೋಂ ಐಸೋಲೇಷನ್​ನಲ್ಲಿರುವ ಕರೊನಾ ಸೋಂಕಿತರ ಮನೆ ಬಾಗಿಲಿಗೇ ಹೋಗಿ ವೈದ್ಯಕೀಯ ನೆರವು ನೀಡುತ್ತಿದೆ.

ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಮಾಜ್ ತಂಡವು ಕರೊನಾ ಸೋಂಕಿತ ವೃದ್ಧರ ಆರೈಕೆ ಮಾಡುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಮಾಜ್ ಅವರು ಸ್ನೇಹಿತರೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಅಗತ್ಯವಿದ್ದವರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಈ ತಂಡದಲ್ಲಿ ಇರುವವರೆಲ್ಲರೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು. ಇದನ್ನೂ ಓದಿರಿ ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರ ಸರ್ಕಾರ

ಈ ತಂಡವು ಹೋಂ ಐಸೋಲೇಷನ್ ಆದವರ ಮನೆಗೇ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುತ್ತಿದೆ. ಸೋಂಕಿತನ ಆರೋಗ್ಯ ಸ್ಥಿತಿ ಗಮನಿಸಿ ಟೆಲಿ ಮೆಡಿಷನ್ ಬಗ್ಗೆ ಅರಿವು ಮೂಡಿಸುತ್ತಿದೆ. ಸೋಂಕಿತನಿಗೆ ಆಸ್ಪತ್ರೆಯ ಅವಶ್ಯಕತೆ ಇದ್ದಲ್ಲಿ ವಾರ್ ರೂಂಗೆ ರಿಜಿಸ್ಟ್ರಾರ್ ಮಾಡಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಅನೇಕರಿಗೆ ಟೆಲಿ ಮೆಡಿಸಿನ್‌ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಕೆಲವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲೂ ಸಾಧ್ಯವಾಗುತ್ತಿಲ್ಲ. ಇನ್ನು ಐಸೋಲೇಷನ್ ಪರಿಸ್ಥಿತಿ ನಿಭಾಯಿಸುವ ಅರಿವಿನ ಕೊರತೆ ಕಾಡುತ್ತಿದೆ. ಅಂತವರನ್ನೇ ಕೇಂದ್ರೀಕರಿಸಿರುವ ಈ ತಂಡ ಅವರ ಮನೆಗಳಿಗೇ ಹೋಗಿ ವೈದ್ಯಕೀಯ ನೆರವು ನೀಡುತ್ತಿದೆ.‘

ಬಿಪಿ, ಶುಗರ್, ಆಕ್ಸಿಜನ್ ಪ್ರಮಾಣ ಪರೀಕ್ಷಿಸಿ ಸೂಕ್ತ ಸಲಹೆ ನೀಡುತ್ತಿದೆ. ಇಬ್ಬರು ವೈದ್ಯರ ಸಹಾಯದಿಂದ 10ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಸಮಾಜಮುಖಿ ಸೇವೆ ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವೆ ಮಾಡುತ್ತಿರುವ ಮೆಡಿಕಲ್ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.