ಜಿಲ್ಲೆ

ಮದ್ದೂರಲ್ಲಿ ಮಾವಿನ ಕಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಬದಿ ಮಾವು ಚೆಲ್ಲಾಪಿಲ್ಲಿ

arunakunigal

ಮಂಡ್ಯ: ಮಾವಿನಕಾಯಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುರಸಭೆ ಕಚೇರಿ ಬಳಿ ಪಲ್ಟಿಯಾಗಿದೆ.

ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ ಬುಧವಾರ ಮಾವಿನಕಾಯಿ ಲೋಡ್​ ಮಾಡಿಕೊಂಡು ಆಂಧ್ರಪ್ರದೇಶದ ಚಿತ್ತೂರಿಗೆ ಲಾರಿ ಹೋಗುತ್ತಿತ್ತು. ಮಾರ್ಗಮಧ್ಯೆ ಮದ್ದೂರಲ್ಲಿ ಕಾರನ್ನು ಹಿಂದಿಕ್ಕುವ ಭರದಲ್ಲಿ ಹೋದ ಲಾರಿ ನಿಯಂತ್ರಣ ತಪ್ಪಿ ರಸ್ತೆಬದಿಗೆ ಪಲ್ಟಿಯಾಗಿದೆ. ರಸ್ತೆಬದಿ ಮಾವಿನ ಕಾಯಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಚಾಲಕ ಮತ್ತು ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.