ಜಿಲ್ಲೆ

ಮಂಗಳೂರಲ್ಲಿ ಬಾಗಲಕೋಟೆ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

arunakunigal

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮಂಗಳೂರಿನ‌ ಮೋರ್ಗನ್ಸ್ ಗೇಟ್​ನಲ್ಲಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನಾಗೇಶ್ ಶೆರಗುಪ್ಪಿ(30) ಮತ್ತು ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಮೃತ ದುರ್ದೈವಿಗಳು. ಇವರೆಲ್ಲೂ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವರು. ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನಾಗೇಶ ಶೆರಗುಪ್ಪಿ ವಾಸವಿದ್ದರು.

ನಾಗೇಶ್ ಚಾಲಕನಾಗಿದ್ದ. ವಿಜಯಲಕ್ಷ್ಮೀ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ನಾಗೇಶ್‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮನೆಯೊಳಗೆ ಮಲಗಿದ ಸ್ಥಿತಿಯಲ್ಲೇ ಮೂವರು ಮೃತಪಟ್ಟಿದ್ದಾರೆ. ಪತ್ನಿ ಮತ್ತು ಮಕ್ಕಳಿಗೆ ವಿಷ ಕೊಟ್ಟು ಬಳಿಕ ನಾಗೇಶ್ ಶೆರಗುಪ್ಪಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಂಗಳೂರು ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿದಲ್ಲ.