ಜಿಲ್ಲೆ

ಹೆಂಡತಿ ಸತ್ತ ಮರುದಿನವೇ ಪ್ರಾಣಬಿಟ್ಟ ಗಂಡ!

arunakunigal

ಮಂಡ್ಯ: ಒಂದೇ ದಿನದ ಅಂತರದಲ್ಲಿ ಪತಿ- ಪತ್ನಿ‌ ಮೃತಪಟ್ಟ ಘಟನೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಸಂಭವಿಸಿದೆ.

ಚಾಮುಂಡಪ್ಪ (74) ಮತ್ತು ಜಯಮ್ಮ(62) ಮೃತ ದಂಪತಿಗಳು. ಅನಾರೋಗ್ಯದಿಂದಾಗಿ ಗುರುವಾರ ಜಯಮ್ಮ ಕೊನೆಯುಸಿರೆಳೆದಿದ್ದರು. ಪತ್ನಿ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ಮರುದಿನವೇ ಮೃತಪಟ್ಟಿದ್ದಾರೆ.

ನಾಲೈದು ದಿನಗಳ ಹಿಂದೆ ಚಾಮುಂಡಪ್ಪಗೆ ಕರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಈ ನಡುವೆ ಪತ್ನಿ ಮೃತಪಟ್ಟಿದ್ದು, ಈ ಸಂಬಂಧ ತೀವ್ರ ಘಾಸಿಗೊಂಡಿದ್ದ ಚಾಮುಂಡಪ್ಪ ಶುಕ್ರವಾರ ಮೃತಪಟ್ಟಿದ್ದಾರೆ.