ಜಿಲ್ಲೆ

ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋದವ ಶವವಾಗಿ ಪತ್ತೆ: ಕಾರಣ ನಿಗೂಢ

mahalakshmihm

ಆನೇಕಲ್: ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಆನೇಕಲ್​ ಪಟ್ಟಣದ ನಿವಾಸಿ ನಂದಕುಮಾರ್​ ಮೃತ ಯುವಕ ಎಂದು ಗುರುತಿಸಲಾಗಿದೆ. ತಮಿಳುನಾಡಿ ಧರ್ಮಪುರಿಯ ರೈಲ್ವೆ ಹಳಿ ಮೇಲೆ ಭಾನುವಾರ ಯುವಕನ ಶವ ಪತ್ತೆಯಾಗಿದೆ.

ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಹೋದವ ಮನೆಗೆ ವಾಪಸ್ ಆಗಿರಲಿಲ್ಲ. ಚಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಆನೇಕಲ್​ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಲಾಗಿತ್ತು.

ಈತ ಸಾಲ ಮಾಡಿಕೊಂಡು ಊರು ಬಿಟ್ಟಿದ್ದ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿಯೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. (ದಿಗ್ವಿಜಯ ನ್ಯೂಸ್​)