More

    ಹಣಕ್ಕಾಗಿ ಮನೆ ಮಾಲೀಕನ ಮಗನನ್ನೇ ಕಿಡ್ನ್ಯಾಪ್​ ಮಾಡಿ ವಿಫಲ ಯತ್ನ, 24 ಗಂಟೆಯಲ್ಲೇ ಸೆರೆಸಿಕ್ಕ ಖದೀಮ ದಂಪತಿ!

    ಬೆಂಗಳೂರು: ಉಂಡ ಮನೆಗೆ ಕನ್ನ ಹಾಕಿದ ಭೂಪ, ಲಕ್ಷ ಲಕ್ಷ ಹಣಕ್ಕಾಗಿ ಮಾಲೀಕನ ಮಗನನ್ನೇ ಅಪಹರಿಸಿದ ಕೆಲವೇ ಗಂಟೆಯಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೊನೆಗೂ ಬಾಲಕನ ಅಪಹರಣದ ಪ್ರಕರಣ ಸುಖಾಂತ್ಯ ಕಂಡಿದೆ.

    ಬೆಂಗಳೂರು ಪೂರ್ವ ತಾಲೂಕಿನ ಕಿತ್ತಗನೂರಿನ ಹ್ಯಾಪಿ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, 5 ಲಕ್ಷ ರೂ. ಹಣ ಕೊಡದಿದ್ರೆ ಮಗನನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ್ದ 24 ಗಂಟೆಯಲ್ಲೇ ಆವಲಹಳ್ಳಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದು ಹೆಡೆಮುರಿಕಟ್ಟಿದ್ದಾರೆ.

    ಕೆಆರ್ ಪುರಂ ಮೂಲದ ಶಕ್ತಿವೇಲು ಮತ್ತು ಸುನಿತಾ ಬಂಧಿತರಾಗಿದ್ದು, ಈ ಇಬ್ಬರು ಮನೋಜ್​ ಕುಮಾರ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದರು. ದುಡ್ಡಿನ ಆಸೆಗೆ ಬಿದ್ದು, ಮನೋಜ್ ಅವರ 6 ವರ್ಷದ ಮಗನನ್ನು ಕಿಡ್ಯ್ನಾಪ್​ ಮಾಡಲು ಹೋಗಿ ಈಗ ಕಂಬಿ ಎಣಿಸುತ್ತಿದ್ದಾರೆ.

    ಮಗ ಶಾಲೆಯಿಂದ ಬರುವ ವ್ಯಾನ್ ಅಡ್ಡಗಟ್ಟಿ ಕಿಡ್ನ್ಯಾಪ್​ಗೆ ಯತ್ನಿಸಿದ್ದಾರೆ. ಶಾಲಾ ವ್ಯಾನ್​ ಚಾಲಕ ಬಾಲಕನನ್ನು ನೀಡಲು ನಿರಾಕರಿಸಿದ್ದಾನೆ. ಈ ವೇಳೆ ಅಲ್ಲಿಂದ ಕಾಲ್ಕಿತ್ತ ಆರೋಪಿಗಳು, ನಂತರವೂ ಮನೋಜ್​ ಕುಮಾರ್ ಅವರಿಗೆ ಕರೆ ಮಾಡಿ, 5 ಲಕ್ಷ ರೂ. ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೋಷಕರನ್ನು ತೋರಿಸಿದರೆ ಮಾತ್ರ ಬಾಲಕನನ್ನು ಕಳುಹಿಸಿಕೊಡುವುದಾಗಿ ಹೇಳಿದ್ದ ಚಾಲಕನ ಮೇಲೆಯೂ ಹಲ್ಲೆ ನಡೆಸಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸ್ಥಳೀಯರಿಗೆ ಸೇತುವೆ ಮುಳುಗೋ ಭಯ.. ಇತ್ತ ಪ್ರಾಣಕ್ಕೂ ಲೆಕ್ಕಿಸದ ಪ್ರವಾಸಿಗರಿಗೆ ಸೆಲ್ಫಿ ಕ್ರೇಜ್!

    ಕೆ.ಎನ್.ರಾಜಣ್ಣ ಹೇಳಿಕೆಗೆ ಖಂಡಿಸಿ ಮಂಡ್ಯದಲ್ಲಿ ಜೆಡಿಎಸ್​ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts