ಜಿಲ್ಲೆ

ದೇವರ ಉತ್ಸವ ನೋಡುತ್ತಾ ನಿಂತಿದ್ದವರ ಮೇಲೆ ಆಟೋ ರೂಪದಲ್ಲಿ ಬಂದೆರಗಿದ ಜವರಾಯ! ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

arunakunigal

ತುಮಕೂರು: ದೇವರ ಉತ್ಸವ ನೋಡುತ್ತಾ ನಿಂತಿದ್ದ ಜನರ ಮೇಲೆ ಆಟೋ ರೂಪದಲ್ಲಿ ಬಂದೆರಗಿದ ಜವರಾಯ ಓರ್ವನ ಪ್ರಾಣ ಹೊತ್ತೊಯ್ದಿದ್ದಾನೆ.

ಮಧುಗಿರಿ ತಾಲೂಕಿನ ಸಿದ್ದಾಪುರ ಗೇಟ್ ಬಳಿ ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಗಂಗಾಧರ್ (40) ಮೃತ ದುರ್ದೈವಿ. ಮಧುಗಿರಿ ಪಟ್ಟಣದ ಸಿದ್ದಾಪುರ ಗೇಟ್ ಬಳಿ ಮಣ್ಣಮ್ಮ ದೇವರ ಉತ್ಸವ ನಡೆಯುತ್ತಿತ್ತು. ಜನರೆಲ್ಲವರೂ ದೇವರ ಉತ್ಸವ ನೋಡುತ್ತಾ ನಿಂತಿದ್ದರು.

ಆ ವೇಳೆ ಶಿರಾ ಕಡೆಯಿಂದ ವೇಗವಾಗಿ ಬಂದ ಲಗೇಜ್​ ಆಟೋ ಚಾಲಕನ ನಿಯಂತ್ರಣ ತಪ್ಪಿ ದೇವರ ಉತ್ಸವ ನೋಡುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಗಾಧರ್​ ಮೃತಪಟ್ಟಿದ್ದು, ದೊಡ್ಡಮ್ಮ, ನರಸಮ್ಮ, ಕುಮಾರ್ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಆಟೋ ಚಾಲಕನನ್ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.