ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಿಗೆ ಉತ್ತಮ ಸ್ಥಾನಮಾನವಿದೆ. ಉತ್ತಮ ನಾಯಕನ ಆಯ್ಕೆ ಮಾಡಲು ಪ್ರತಿಯೊಬ್ಬ ಪ್ರಜೆಯೂ ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಕೇಶವ ಬಂಗೇರ ಹೇಳಿದರು.
ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಉದ್ಘಾಟಿಸಿ ಮಾತನಾಡಿದರು. ಅಮೃತ ಭಾರತಿ ಟ್ರಸ್ಟ್‌ನ ಸದಸ್ಯ ಬಿ. ಗಣೇಶ್ ಕಿಣಿ ಬೆಳ್ವೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಜ್ಜನರ ಆದರ್ಶವನ್ನು ಪಾಲಿಸಬೇಕು ಎಂದರು.
ಪ್ರಾಂಶುಪಾಲ ಪ್ರಕಾಶ್ ಜೋಗಿ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಪ್ರಕಾಶ್ ಭಟ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟ್ ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ, ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಯೋಗೀಶ್ ಭಟ್, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ಹಾಸ್ಟೆಲ್ ಕಮಿಟಿಯ ಸದಸ್ಯ ರಾಮಕೃಷ್ಣ ಆಚಾರ್ಯ, ಪಿ.ಆರ್.ಒ ವಿಜಯಕುಮಾರ್ ಶೆಟ್ಟಿ, ಸಮಿತಿ ಸಂಯೋಜಕರಾದ ದತ್ತಾನಂದ್, ಚಂದ್ರಹಾಸ್, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅನ್ನಪೂರ್ಣ ನಿರೂಪಿಸಿದರು. ಸೃಷ್ಟಿ ಕೆ.ಪೂಜಾರಿ ಸ್ವಾಗತಿಸಿದರು. ಅನುಷಾ ನಾಯಕ್ ಅತಿಥಿಗಳ ಪರಿಚಯಿಸಿದರು. ಧೃತಿ ಎಸ್.ಪೂಜಾರಿ ಸಮಿತಿಯ ಪದಾಧಿಕಾರಿ, ಸಂಯೋಜಕರ ಪಟ್ಟಿ ವಾಚಿಸಿದರು. ಸಮಿತಿ ಅಧ್ಯಕ್ಷ ಆದಿತ್ಯ ಶೆಟ್ಟಿ ವಂದಿಸಿದರು.