ಜಿಲ್ಲೆ

ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆ, ಗಂಡನ ಆ ಕಿರುಕುಳಕ್ಕೆ ಬಲಿಯಾದಳೇ ಪತ್ನಿ

ಮೈಸೂರು: ಹುಣಸೂರು ತಾಲೂಕಿನ ಸದಾಶಿವಕೊಪ್ಪಲು ಗ್ರಾಮದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆಯ ಶವ ಪತ್ತೆಯಾಗಿದೆ.

ಕೃತಿಕಾ(21) ಮೃತ ದುರ್ದೈವಿ. ಕೆ.ಆರ್. ನಗರ ತಾಲೂಕಿನ ಸಿದ್ದಾಪುರ ಮೂಲದ ಕೃತಿಕಾಳನ್ನು ಎರಡು ವರ್ಷದ ಹಿಂದೆ ವಿಶ್ವನಾಥ್ ಎಂಬಾತನೊಂದಿಗೆ ಮದುವೆ ಮಾಡಲಾಗಿತ್ತು.

ಕೃತಿಕಾಳ ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ 3 ಲಕ್ಷ ರೂ. ನಗದು, 100 ಗ್ರಾಂ ಚಿನ್ನ‌ವನ್ನು ಆಕೆಯ ಪೋಷಕರು ನೀಡಿದ್ದರಂತೆ. ಮದುವೆ ಬಳಿಕವೂ ಮತ್ತಷ್ಟು ವರದಕ್ಷಿಣೆಗಾಗಿ ಮಗಳಿಗೆ ಅಳಿಯ ಕಿರುಕುಳ ಕೊಡುತ್ತಿದ್ದ ಮೃತಳ ಪೋಷಕರು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇಲ್ಲವೇ ಅವಳ ಗಂಡನೇ ಕೊಲೆ ಮಾಡಿರಬೇಕು ಎಂದು ಆರೋಪಿಸಿದ ಮೃತಳ ಪೋಷಕರು, ವಿಶ್ವನಾಥ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಹುಣಸೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಇಂದು ಸಂಭವಿಸಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.