ಜಿಲ್ಲೆ

ಕೊಳ್ಳೇಗಾಲ ಶಾಸಕ ಎನ್.ಮಹೇಶ್​ಗೆ ಪತ್ನಿ ವಿಯೋಗ

ಕೊಳ್ಳೇಗಾಲ: ಶಾಸಕ‌ ಎನ್.ಮಹೇಶ್ ಅವರ ಪತ್ನಿ ವಿಜಯಾ ಭಾನುವಾರ ರಾತ್ರಿ ಬೆಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ‌ ನಿಧನರಾದರು.

ಬೆಂಗಳೂರಿನ ಜೆ.ಪಿ.ನಗರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಕನಕಪುರ ರಸ್ತೆಯಲ್ಲಿರುವ ವಿಜಯಾ ಅವರ ನಿವಾಸದ ಕಾನ್ಸಿ ಫೌಂಡೇಶನ್​ನಲ್ಲಿ ಸೋಮವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಲಿದೆ.