ಬೆಂಗಳೂರು: ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ, ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತದೆ. ಈ ಇಲಾಖೆ ನಡೆಸುವ ದಾಳಿಗೆ ರಾಜಕೀಯ ನಂಟು ಬೆಸೆಯುವುದು ಸಲ್ಲದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪ್ರತ್ಯೇಕವಾಗಿ ಸುದ್ದಿಗಾರರಿಗೆ ಮಂಗಳವಾರ ಮಾತನಾಡಿದರು.ಐಟಿ ದಾಳಿಗೂ, ಬಿಎಸ್ವೈಗೂ, ಬಿಜೆಪಿಗೂ, ಐಟಿ ದಾಳಿಗೂ ಸಂಬಂಧವಿಲ್ಲ. ಈ ವಿಚಾರವಾಗಿ ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿಯನ್ನ ಟೀಕಿಸದಿದ್ದರೆ ಎಚ್.ಡಿ.ಕುಮಾರಸ್ವಾಮಿಗೆ ನಿದ್ದೆ ಬರಲ್ಲ. ಎರಡು ಬಾರಿ ಲಾಟರಿ ಹೊಡೆದು ಮುಖ್ಯಮಂತ್ರಿಯಾದವರು. ಅಧಿಕಾರ ಹೋದ ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಛೇಡಿಸಿದರು.
ಬಿಎಸ್ವೈ ಯಾತ್ರೆಗೆ ಪಕ್ಷದ ವರಿಷ್ಠರು ತಡೆಯೊಡ್ಡಿಲ್ಲ. ಇಷ್ಟಕ್ಕೂ ಒಂಟಿಯಾಗಿ ಬಿಎಸ್ವೈ ಸಂಘಟನಾ ಪ್ರವಾಸ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ತಂಡವಾಗಿ ಯಾತ್ರೆ ಕೈಗೊಳ್ಳಲಿದ್ದು, ವರಿಷ್ಠರೇ ಈ ನಿರ್ಧಾರ ಪ್ರಕಟಿಸಿದ್ದಾರೆ. ಉಪ ಚುನಾವಣೆ ಬಳಿಕ ಪ್ರವಾಸ ಮಾಡಲಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಬಿಜೆಪಿಗೂ ಸಂಬಂಧವಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲವೆಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.