ಜಿಲ್ಲೆ

ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆ! ಇತ್ತೀಚಿಗಷ್ಟೇ ಗೋವಾದಿಂದ ಹಿಂತಿರುಗಿದ್ದ ದಂಪತಿ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ಧಾರವಾಡ: ಪತ್ನಿಯನ್ನು ಕೊಂದು ಬಳಿಕ ಗಂಡನೂ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಧಾರವಾಡ ಹೊರವಲಯದ ಗಣೇಶನಗರದ ಗಳವಿ ದಡ್ಡಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಮನೀಷಾ ಕೊಲೆಯಾದ ಪತ್ನಿ. ಈಕೆಯ ಪತಿ ಚಟ್ಟು ಗದಗವಾಲೆ ಆತ್ಮಹತ್ಯೆ ಮಾಡಿಕೊಂಡವ. ಇವರಿಬ್ಬರೂ ಕೆಲಸಕ್ಕೆಂದು ಗೋವಾಗೆ ಹೋಗಿದ್ದರು. ನಾಲ್ಕು ದಿನದ ಹಿಂದಷ್ಟೇ ಪತಿ-ಪತ್ನಿ ಇಬ್ಬರೂ ಗೋವಾದಿಂದ ವಾಪಸ್​ ಊರಿಗೆ ಬಂದಿದ್ದರು.

ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮನಿಷಾ ಮತ್ತು ಚಟ್ಟು ಗದಗವಾಲೆ ನಡುವೆ ಜಗಳ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅಂದು ರಾತ್ರಿಯೇ ಪತ್ನಿಯನ್ನು ಕೊಲೆ ಮಾಡಿ,‌ ಬಳಿಕ ಬಳಿಕ ತಾನೂ ಸಾವಿನ ಮನೆಯ ಕದತಟ್ಟಿದ್ದಾನೆ. ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ಏನೆಂದು ತನಿಖೆ ಬಳಿಕ ಗೊತ್ತಾಗಲಿದೆ.