ಜಿಲ್ಲೆ

ಹಿಜಾಬ್, ಹಲಾಲ್, ಜಟ್ಕಾ ಕಟ್ ಆಯ್ತು... ಇದೀಗ ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

arunakunigal

ಮಂಡ್ಯ: ಹಿಜಾಬ್ ಆಯ್ತು, ಬಾಯ್ಕಟ್​ ಆಯ್ತು, ಹಲಾಲ್-ಜಟ್ಕಾ ಕಟ್ ಆಯ್ತು... ಇದೀಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನ ಪ್ರತಿಷ್ಟಾಪಿಸದಂತೆ ಅಭಿಯಾನ ಶುರುವಾಗಿದೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನಿಕ ಶ್ರೀನಿವಾಸನ್ ಗುರೂಜಿ ನೇತೃತ್ವದಲ್ಲಿ ಅಭಿಯಾನ ಶುರುವಾಗಿದ್ದು, ಮುಸ್ಲಿಮರು ದೇವರ ವಿಗ್ರಹಗಳನ್ನ ಕೆತ್ತನೆ ಮಾಡುವುದು ಸರಿಯಲ್ಲ. ಅನ್ಯ ಧರ್ಮದವರು ತಯಾರಿಸಿದ ವಿಗ್ರಹ ಪ್ರತಿಷ್ಠೆಯನ್ನು ಶಾಸ್ತ್ರವೂ ಒಪ್ಪಲ್ಲ. ಹಿಂದಿನಿಂದಲೂ ಊರಿನ ಯಜಮಾನರ ಮಾರ್ಗದರ್ಶನದಲ್ಲಿ ಮೂರ್ತಿ ಕೆತ್ತನೆಯಾಗುತ್ತಾ ಬಂದಿದೆ. ಶಾಸ್ತ್ರ ಪ್ರಕಾರವಾಗಿ ವಿಶ್ವಕರ್ಮ ಜನಾಂಗದವರೇ ಮೂರ್ತಿ ಕೆತ್ತನೆ ಮಾಡಬೇಕು. ವಿಶ್ವಕರ್ಮದ ಸಮುದಾಯದವರು ಶಾಸ್ತ್ರ ಅಧ್ಯಯನ ಮಾಡಿ ವಿಗ್ರಹ ಕೆತ್ತುತ್ತಾರೆ. ಮುಸ್ಲಿಮರ ಹಿಂದೂ ದೇವರ ವಿಗ್ರಹ ಕೆತ್ತನೆ ಮಾಡುವುದೇ ಅಪರಾಧ ಎಂದಿದ್ದಾರೆ.

ಮುಸ್ಲಿಮರು ವಿಗ್ರಹಗಳನ್ನ ಕೆತ್ತುತ್ತಾರೆ. ಅದನ್ನ ಪ್ರತಿಷ್ಠಾಪನೆ ಮಾಡಲ್ವಾ? ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್, ಮುಸ್ಲಿಮರು ವಿಗ್ರಹ ಕೆತ್ತನೆ ಮಾಡುವುದನ್ನು ಶಾಸ್ತ್ರ ಒಪ್ಪಲ್ಲ. ಮುಂದೆ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹವನ್ನ ಯಾವ ದೇವಾಲಯದಲ್ಲೂ ಪ್ರತಿಷ್ಠಾಪನೆ ಮಾಡದಂತೆ ಅಭಿಯಾನ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ದೇಗುಲದ ಅರ್ಚಕರಲ್ಲಿ ಮನವಿ ಮಾಡ್ತೇನೆ ಎಂದರು.