ಜಿಲ್ಲೆ

ತುಮಕೂರಲ್ಲಿ ಹಿಜಾಬ್​ ವಿವಾದ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಉಪನ್ಯಾಸಕಿ

ತುಮಕೂರು: ಹಿಜಾಬ್​ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ನಗರದ ಜೈನ್​ ಪಿಯು ಕಾಲೇಜಿನ ಇಂಗ್ಲಿಷ್​ ಉಪನ್ಯಾಸಕಿ ಚಾಂದಿನಿ ಹಿಜಾಬ್​ ಧರಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದಿನಿಂದಲೂ ಹಿಜಾಬ್​ ಧರಿಸಿಯೇ ಕಾಲೇಜಿಗೆ ಚಾಂದಿನಿ ಹಾಜರಾಗುತ್ತಿದ್ದರು. ಇತ್ತೀಚೆಗೆ ಹಿಜಾಬ್​-ಕೇಸರಿಶಾಲು ವಿವಾದ ತಾರಕ್ಕೇರಿದ ನಂತರ ಹಿಜಾಬ್​ ಧರಿಸಿ ಕಾಲೇಜಿಗೆ ಹಾಜರಾಗದಂತೆ ಆಡಳಿತ ಮಂಡಳಿ ಸೂಚಿಸಿತ್ತು.

ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ತುಮಕೂರು ನಗರದ ಹಲವು ಕಡೆ ಚಾಂದಿನಿ ಅಥಿತಿ ಉಪನ್ಯಾಸಕಿಯಾಗಿ ಕೆಸಲ ಮಾಡುತ್ತಿದ್ದರು. ಗುರುವಾರ ಜೈನ್ ಪಿಯು ಕಾಲೇಜಿಗೆ ರಾಜೀನಾಮೆ ಕೊಟ್ಟಿದ್ದಾರೆ.