ಜಿಲ್ಲೆ

ಹರಿಕಥಾ ವಿದ್ವಾನ್ ಲಕ್ಷ್ಮಣ್​ ದಾಸ್​ ವೇಲಣಕರ್​ ನಿಧನ

ಬೆಂಗಳೂರು: ಹರಿಕಥಾ ಪರಂಪರೆಗೆ ಅಮೋಘ ಕೊಡುಗೆ ನೀಡಿರುವ ಹಿರಿಯ ವಿದ್ವಾನ್ ಮತ್ತು ಅಧ್ಯಾತ್ಮಿಕ ಚಿಂತಕ, ಪ್ರವಚನಕಾರ ಲಕ್ಷ್ಮಣ್​ ದಾಸ್​ ವೇಲಣಕರ್​ ಬುಧವಾರ ಬೆಳಗ್ಗೆ ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಣ್​ ದಾಸ್​ ವೇಲಣಕರ್​ ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಇವರ ಪುತ್ರ ದತ್ತಾತ್ರೇಯ ವೇಲಣಕರ್ ಅವರು ಖ್ಯಾತ ಹಿಂದೂಸ್ತಾನಿ ಗಾಯಕ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಲಕ್ಷ್ಮಣದಾಸ್, ಹೆಸರಾಂತ ಹರಿಕಥಾ ವಿದ್ವಾನ್ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸರ ಶಿಷ್ಯರಾಗಿದ್ದರು.