More

    ಡಿ.31ಕ್ಕೆ ಕರ್ನಾಟಕ ಬಂದ್: ಎಂಇಎಸ್​ ಬ್ಯಾನ್​ಗೆ ಆಗ್ರಹಿಸಿ ಸಿಡಿದೆದ್ದ ಕನ್ನಡಿಗರು

    ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್​ ಮತ್ತು ಶಿವಸೇನೆ ವಿರುದ್ಧ ಕನ್ನಡಿಗರು ಕಹಳೆ ಮೊಳಗಿಸಿದ್ದಾರೆ. ಡಿ.29ರೊಳಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎಂಇಎಸ್​ ಅನ್ನು ನಿಷೇಧ ಮಾಡಬೇಕು ಎಂದು ಗಡುವು ವಿಧಿಸಿರುವ ಕನ್ನಡಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು, ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ.

    ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಕನ್ನಡಪರ ಸಂಘಟನೆಗಳು, ಎಂಇಎಸ್​ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡೆಡ್​ಲೈನ್​ ವಿಧಿಸಿವೆ. ಬೆಂಗಳೂರಿನ ಟೌನ್ ಹಾಲ್​ನಿಂದ ಕನ್ನಡಿಗರ ಶಕ್ತಿ ಪ್ರದರ್ಶನಗೊಳ್ಳಲಿದೆ. ಇಲ್ಲಿ ಯಾವುದೇ ನೈತಿಕ ಬೆಂಬಲ ಅನ್ನೋದು ಬೇಡ. ಎಲ್ಲರೂ ಒಟ್ಟಾಗಿ ಕರ್ನಾಟಕ ಬಂದ್‌ ಬೆಂಬಲಿಸಬೇಕು. ಇಡೀ ರಾಜ್ಯವೇ ಒಂದಾಗಬೇಕು. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.

    ಸಭೆಯಲ್ಲಿ ಮಾತನಾಡಿದ ಕನ್ನಡ ಫಿಲಿಂ ಚೇಂಬರ್​ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, 200-250 ಕನ್ನಡಪರ ಸಂಘಟನೆಗಳು ಇಂದು ಸಭೆಯಲ್ಲಿ ಭಾಗವಹಿಸಿ. ಅವರೆಲ್ಲರ ಒಕ್ಕರಲ ಆಗ್ರಹ ಅಂದ್ರೆ ಎಂಇಎಸ್​ ಬ್ಯಾನ್​ ಮಾಡಬೇಕು ಎಂಬುದು. ಇದು ವೈಯಕ್ತಿಕ ಹೋರಾಟವಲ್ಲ, ಸ್ವಯಂ ಪ್ರೇರಿತವಾಗಿ ಬಂದ್​ಗೆ ಬೆಂಬಲ ನೀಡಬೇಕು. ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆಲ್ಲ ಪೂರ್ಣ ವಿರಾಮ ಹಾಕಲು ಎಲ್ಲ ರಾಜಕೀಯ ಪಕ್ಷದ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಬನ್ನಿ. ಮರಾಠಿಗರ ಬಳಿ ಮತಭಿಕ್ಷೆಗೆ ಹೋಗೋದು ಬಿಡಿ ಎಂದರು. ಎಂಇಎಸ್​ ಬ್ಯಾನ್​ ಆಗದಿದ್ದಲ್ಲಿ ಡಿ.31ರಂದು ಕರ್ನಾಟಕ ಬಂದ್​ ಆಗಲಿದೆ. ಸಿನಿಮಾ ಚಿತ್ರೀಕರಣ, ಚಿತ್ರಮಂದಿರಗಳೂ ಬಂದ್​ ಆಗಲಿವೆ ಎಂದರು.

    ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್‌ ಆಗಲಿದೆ. ಬಂದ್‌ ದಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಟೌನ್‌ಹಾಲ್‌ನಿಂದ ಬೃಹತ್‌ ಮೆರವಣಿಗೆ ನಡೆಯಲಿದೆ. ಹೋರಾಟಕ್ಕೆ ಚಲನಚಿತ್ರ ನಟರೂ ಬೆಂಬಲ ಸೂಚಿಸಲಿದ್ದಾರೆ.

    ಕೆಎಸ್ಸಾರ್ಟಿಸಿ ಬಸ್​ಗಳ ಮೇಲೆ ಮರಾಠಿ ಲಿಪಿ ಬರೆದ ‘ಮಹಾ’ ಪುಂಡರು! ಘೋಷಣೆ ಕೂಗುವಂತೆ ಚಾಲಕನಿಗೆ ಧಮ್ಕಿ

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts