ಜಿಲ್ಲೆ

ಬಾಲಕಿಯರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ ಅರ್ಚಕನಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ

arunakunigal

ಬೆಂಗಳೂರು: ಬಾಲಕಿಯರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ ಅರ್ಚಕನಿಗೆ ಎಫ್​ಟಿಎಸ್​ಸಿ 1ನೇ ನ್ಯಾಯಾಲಯವು 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

ಚಂದ್ರಾಲೇಔಟ್​ ನಿವಾಸಿ ಸುಧೀಂದ್ರ ಅಪರಾಧಿ. ಕೆಲ ವರ್ಷಗಳ ಹಿಂದೆ ಸುಧೀಂದ್ರ ಆತನ ಮನೆ ಸಮೀಪದಲ್ಲಿ ಬಾಲಕಿಯರ ಜತೆಗೆ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದ. ಚಂದ್ರಾಲೇಔಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸುಧೀಂದ್ರನ ವಿರುದ್ಧ ಎಫ್​​ಟಿಎಸ್​ಸಿ 1ನೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ ಸಾಕ್ಷಾಧಾರಗಳನ್ನು ಪರಿಗಣಿಸಿ ಸುಧೀಂದ್ರನನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. ಜತೆಗೆ ನೊಂದ ಬಾಲಕಿಯರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.