ತುಮಕೂರು: ಲಂಚ ಸ್ವೀಕರುತ್ತಿರುವಾಗಲೇ ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಎಸ್ ಪುರ ಪಿಎಸ್ಐ ಸೋಮಶೇಖರ್ ಮತ್ತು ಮುಖ್ಯಪೇದೆ ಅಹಮದ್ ಸಿಕ್ಕಿಬಿದ್ದಿದ್ದಾರೆ.
ಗುಬ್ಬಿ ತಾಲೂಕಿನ ಸಿಎಸ್ ಪುರದಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹ ಪ್ರಕರಣ ಸಂಬಂಧ ಚಂದ್ರಣ್ಣ ಎಂಬುವರ ಬಳಿ ಪಿಎಸ್ಐ ಸೋಮಶೇಖರ್ 28 ಸಾವಿರ ರೂಪಾಯಿ ಲಂಚ ಕೇಳಿದ್ದರು. ಮುಂಗಡವಾಗಿ 12 ಸಾವಿರ ರೂಪಾಯಿಯನ್ನ ಈ ಹಿಂದೆಯೇ ಪಡೆದಿದ್ದ ಪಿಎಸ್ಐ, ಬುಧವಾರ ಬಾಕಿ 16 ಸಾವಿರ ರೂ. ಪಡೆಯುವಾಗ ತುಮಕೂರು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದೇ ವೇಳೆ ಎಸಿಬಿ ಕಸ್ಟಡಿಯಿಂದ ತಪ್ಪಿಸಿಕೊಂಡು ಪೇದೆ ನಯಾಸ್ ಓಡಿದ್ದರು. ಇವರನ್ನ ಬೆನ್ನತ್ತಿದ ಎಸಿಬಿ ಪೇದೆಯನ್ನ ಹಿಡಿದು ಕಸ್ಟಡಿಗೆ ಕರೆತಂದರು.