ಜಿಲ್ಲೆ

ಕೊನೆಗೂ ಗುಡ್​ನ್ಯೂಸ್​ ಕೊಟ್ಟ ರಮ್ಯಾ! ಮೋಹಕ ತಾರೆಯ ಈ ನಿರ್ಧಾರದ ಹಿಂದಿದೆಯಾ ಆ ನೋವು?

ಬೆಂಗಳೂರು: ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಡ್ತೀನಿ ಎಂದಿದ್ದ ಮೋಹಕ ತಾರೆ ರಮ್ಯಾ, ಕೊನೆಗೂ ಆ ಗುಡ್​ನ್ಯೂಸ್​ ಏನೆಂದು ಬಹಿರಂಗ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ. ರಮ್ಯಾರನ್ನ ಮರು ಸ್ವಾಗತಿಸಲು ವೇದಿಕೆ ಸಜ್ಜುಗೊಳಿಸುತ್ತಾ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ರಾಜಕೀಯದಲ್ಲಿ ರಮ್ಯಾ ಟಾರ್ಗೆಟ್ ಆಗಿದ್ದಾರೆ. ಡಿಕೆಶಿಗೆ ಬುದ್ಧಿಮಾತು ಹೇಳಿದ ರಮ್ಯಾಗೆ ಡಿಕೆಶಿ ಬೆಂಬಲಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಈ ನಡುವೆ ರಾಜಕೀಯದಿಂದ ಬೇಸತ್ತಂತಿರುವ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುವ ಸುಳಿವು ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಆಸೆಯನ್ನೂ ಹೊರಹಾಕಿದ್ದಾರೆ.

'ಒಟ್ಟಿಗೆ ನಟಿಸೋಣ ರಕ್ಷಿತ್' ಅಂತ ಇನ್​ಸ್ಟಾಗ್ರಾಂ ಖಾತೆಯಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ರಮ್ಯಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ 'ದಿಗ್ವಿಜಯ ನ್ಯೂಸ್' ಜೊತೆ ಮಾತನಾಡುತ್ತಾ 'ಶೀಘ್ರವೇ ಗುಡ್ ನ್ಯೂಸ್ ಕೊಡ್ತೀನಿ' ಅಂದಿದ್ರು. ಆ ಸಿಹಿ ಸುದ್ದಿ ಸಿನಿಮಾಗೆ ಕಮ್ ಬ್ಯಾಕ್ ಆಗೋದಾ? ಎಂಬ ಚರ್ಚೆಯೂ ಶುರುವಾಗಿದೆ.

ಡಿಕೆಶಿಗೆ ರಮ್ಯ ಬುದ್ಧಿಮಾತು: "ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರ ಕುಟುಂಬಗಳಲ್ಲಿ ವಿವಾಹವೂ ನಡೆಯುತ್ತದೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್​ ಅವರೇ, ಎಂ.ಬಿ.ಪಾಟೀಲ್​ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?'' ಎಂದು ಪಕ್ಷದ ಅಧ್ಯಕ್ಷರಿಗೆ ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ಬುದ್ಧಿವಾದ ಹೇಳಿದ್ದರು. ಇದು ಡಿಕೆಶಿ ಅಭಿಮಾನಿಗಳನ್ನು ಕೆರಳಿಸಿತ್ತು.