ತುಮಕೂರು: ಅಬ್ಬಬ್ಬಾ! ಈ ದೃಶ್ಯ ನೋಡಿದ್ರೆ ಅಚ್ಚರಿ ಆಗುತ್ತೆ. ಮೀನುಗಳೇನಾದರೂ ನೃತ್ಯ ಮಾಡುತ್ತಿವೆಯಾ? ಅನ್ಸೋದು ಗ್ಯಾರಂಟಿ.
ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ನೂರಾರು ಕೆರೆಗಳು ಕೋಡಿಯಾಗಿವೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈ ವೇಳೆ ಸಾವಿರಾರು ಮೀನುಗಳು ನೀರಿನಿಂದ ಮೇಲಕ್ಕೆ ಜಿಗಿದು ಮತ್ತೆ ನೀರಿಗೆ ಬೀಳುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ನೆಟ್ಟಿಗರು ವ್ಹಾವ್ ಎನ್ನುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಕೆರೆ ಕೋಡಿ ಬಿದಿದ್ದು, ಸ್ಥಳೀಯರು ಬೀಸಿದ ಬಲೆಗೆ ಸಾವಿರಾರು ಮೀನುಗಳು ಬಿದ್ದಿವೆ. ಮಳೆಯನ್ನೂ ಲೆಕ್ಕಿಸದೆ ಮತ್ಸ್ಯ ಬೇಟೆಯಲ್ಲಿ ನಿರತರಾದ ಜನರು ಮೀನುಗಳನ್ನ ಕಂಡು ಸಂತಸ ಪಟ್ಟಿದ್ದಾರೆ.